ಬೆಂಗಳೂರು: ರಾಜ್ಯದಲ್ಲಿ ಇಂದು 19,974 ಱಪಿಡ್ ಆ್ಯಂಟಿಜೆನ್ ಪರೀಕ್ಷೆ ಹಾಗೂ 1,02,480 ಆರ್ಟಿಪಿಸಿಆರ್ ಟೆಸ್ಟ್ಗಳು ಸೇರಿದಂತೆ ಒಟ್ಟು 1,22,454 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಇಂದು 1,630 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈವರೆಗೆ ರಾಜ್ಯದಲ್ಲಿ ಸೋಂಕಿಗೊಳಗಾದವರ ಸಂಖ್ಯೆ 8,78,055ಕ್ಕೆ ಏರಿಕೆಯಾಗಿದೆ.
ಇಂದು ಸೋಂಕಿನಿಂದಾಗಿ 1,333 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಸೋಂಕಿನಿಂದ 8,41,432 ಮಂದಿ ಗುಣಮುಖರಾದಂತಾಗಿದೆ. ಇಂದು 19 ಮಂದಿ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಅನ್ಯಕಾರಣಗಳಿಂದ ಸಾವನ್ನಪ್ಪಿದ 19 ಮಂದಿ ಸೇರಿ ಈವರೆಗೆ ರಾಜ್ಯದಲ್ಲಿ 11,714 ಸೋಂಕಿತರು ಕೊರೊನಾಗೆ ಬಲಿಯಾದಂತಾಗಿದೆ.
ಸದ್ಯ ರಾಜ್ಯದಲ್ಲಿ 24,890 ಆ್ಯಕ್ಟಿವ್ ಕೇಸ್ಗಳಿದ್ದು ಈ ಪೈಕಿ 405 ಸೋಂಕಿತರು ಐಸಿಯುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತನ್ನ ಬುಲೆಟಿನ್ನಲ್ಲಿ ಹೇಳಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post