ನವದೆಹಲಿ: ಮುಂಬೈ ದಾಳಿ ನಡೆದು ಇಂದಿಗೆ 12 ವರ್ಷ.. ಈ ಹಿನ್ನೆಲೆ ಇಂದು ದೇಶದಾದ್ಯಂತ ಘಟನೆಯಲ್ಲಿ ಹುತಾತ್ಮರಾದ ರಕ್ಷಣಾ ಸಿಬ್ಬಂದಿಯನ್ನ ಸ್ಮರಿಸಲಾಯಿತು. ದೆಹಲಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್.. ದೇಶದಲ್ಲಿ ಮುಂದೆ ಇಂಥ ಘಟನೆ ನಡೆಯಲು ಸಾಧ್ಯವೇ ಇಲ್ಲ ಎಂದು ಭರವಸೆ ನೀಡಿದ್ದಾರೆ.
ದೇಶದ ಭದ್ರತೆಯ ವಿನ್ಯಾಸವನ್ನು ಕಳೆದ ಕೆಲವು ವರ್ಷಗಳಲ್ಲಿ ಬದಲಿಸಲಾಗಿದೆ. ಹೀಗಾಗಿ ಮುಂದೆಂದೂ ಇಂಥ ಘಟನೆ ನಡೆಯಲು ಸಾಧ್ಯವಿಲ್ಲ ಎಂದರು. ಇನ್ನು ಸಿನೋ-ಇಂಡಿಯಾ ಬಾರ್ಡರ್ ವಿಚಾರವಾಗಿ ಮಾತನಾಡಿ.. ಲೈನ್ ಆಫ್ ಕಂಟ್ರೋಲ್ನಲ್ಲಿ ಯಾವುದೇ ಬೆಳವಣಿಗೆಗೆ ತಕ್ಕ ಪ್ರತಿಕ್ರಿಯೆ ನೀಡಲು ಬೇಕಾದ ಎಲ್ಲ ಸೌಲಭ್ಯಗಳನ್ನೂ ಸಶಸ್ತ್ರಪಡೆಗಳಿಗೆ ನೀಡಲಾಗಿದೆ. ಭಾರತದ ಗೌರವಕ್ಕೆ ಧಕ್ಕೆಯಾಗಲು ಸರ್ಕಾರ ಎಂದಿಗೂ ಅವಕಾಶ ನೀಡುವುದಿಲ್ಲ ಎಂದರು.
ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತದ ಘನತೆಗೆ, ಸಾರ್ವಭೌಮತ್ವಕ್ಕೆ ಎಂದಿಗೂ ಚ್ಯುತಿ ಬಾರದು ಎನ್ನುವ ಭರವಸೆ ನೀಡುತ್ತೇನೆ. ಪಾಕಿಸ್ತಾನ ಭಯೋತ್ಪಾದಕತೆಯ ನರ್ಸರಿ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post