ಬೆಳಗಾವಿ: ಜಿಲ್ಲೆಯಲ್ಲಿ ಒಂದು ವರ್ಷದ ನಂತರ ಕೆಲಸ ಮಾಡಿಕೊಟ್ಟ ಪಾಲಿಕೆ ಅಧಿಕಾರಿಗೆ ಸಾರ್ವಜನಿಕರು ಹೂವಿನ ಹಾರ ಹಾಕಿ ಅವಮಾನ ಮಾಡಿದ್ದಾರೆ. ಅಲ್ಲದೇ ಈ ಪೋಟೋಗಳನ್ನು ಸೋಶಿಯಲ್ ಮೀಡಿಯದಲ್ಲಿ ಹರಿ ಬಿಟ್ಟಿದ್ದಾರೆ ಎಂದು ಆರೋಪಿಸಿ ಪಾಲಿಕೆ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ.
ಖಾತೆ ಬದಲಾವಣೆ ಕಡಿತ ವಿಳಂಬ ಮಾಡಿದ್ದ ಕಂದಾಯ ವಿಭಾಗದ ನೌಕರರಾದ ಅಬ್ದುಲ್ ಸನದಿ, ಬಿ.ಎಸ್.ತಳಕೇರಿ ಅವರಿಗೆ ವಕೀಲ ಲಕ್ಷ್ಮಣ ಪಾಟೀಲ್ ಹೂವಿನ ಹಾರ ಹಾಕಿದ್ದಾರೆ. ಈ ರೀತಿ ಹೂವಿನ ಹಾರ ಹಾಕಿ ನಮಗೆ ಅವಮಾನ ಮಾಡಲಾಗಿದೆ. ಅಲ್ಲದೇ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿ ಪಾಲಿಕೆ ಸಿಬ್ಬಂದಿ ಬೆಳಗ್ಗೆಯಿಂದ ಕೆಲಸಕ್ಕೆ ಗೈರಾಗಿ ಮೌನ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಸನ್ಮಾನ ಮಾಡಿ ಅವಮಾನ ಮಾಡಿದ ವ್ಯಕ್ತಿ ಕ್ಷಮಾಪಣೆ ಕೇಳಬೇಕೆಂದು ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post