ಚಿಕ್ಕಬಳ್ಳಾಪುರ: ಕಂಟೇನರ್ ಲಾರಿಯೊಂದು ಎರಡು ಸ್ವಿಫ್ಟ್ ಕಾರಿಗೆ ಡಿಕ್ಕಿಹೊಡೆದ ಪರಿಣಾಮ ಐವರು ಮೃತಪಟ್ಟ ಘಟನೆ ತಾಲೂಕಿನ ಚದಲಪುರ ಕ್ರಾಸ್ ಬಳಿ ನಡೆದಿದೆ. ಕಲಾನಂಜಿಯಂ, ಯಮುನಾಚಾರಿ, ವೆಂಕಟೇಶ್ ಜಿಪಿ, ನಿತೀಶ್ಗೌಡ ಮೃತ ದುರ್ದೈವಿಗಳು.
ಬೆಂಗಳೂರಿನಿಂದ ಬಂದಿದ್ದ ಹೆಚ್.ಆರ್ 38, ಎ 4532 ನಂಬರ್ನ ಕಂಟೇನರ್ ಲಾರಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಸ್ವಿಫ್ಟ್ ಕಾರ್ಗೆ ಗುದ್ದಿದೆ. ನಂತರ ಅಲ್ಲೇ ಪಕ್ಕದಲ್ಲಿದ್ದ ಕಾರಿಗೂ ಡಿಕ್ಕಿಹೊಡೆದು ನಂದಿನಿ ಪಾರ್ಲರ್ ಒಂದಕ್ಕೆ ನುಗ್ಗಿದೆ. ಪರಿಣಾಮ ಕಾರುಗಳೆರಡೂ ಸಂಪೂರ್ಣ ಜಖಂ ಆಗಿದ್ದು, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
6 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರಲ್ಲಿ ಮತ್ತೆ ಇಬ್ಬರು ಮೃತಪಟ್ಟಿದ್ದಾರೆ. ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು ಲಾರಿ ಚಾಲಕನನ್ನು ಬಂಧಿಸಿದ್ದಾರೆ. ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post