ಚೆನ್ನೈ: ತಮಿಳುನಾಡಿನಲ್ಲಿ ನಿವಾರ್ ಚಂಡಮಾರುತ ಆರ್ಭಟಿಸುತ್ತಿದೆ. ನಿನ್ನೆ ತಡರಾತ್ರಿ ಪುದುಚೆರಿ ಬಳಿ ಸೈಕ್ಲೋನ್ ಅಪ್ಪಳಿಸಿದೆ. ಚಂಡಮಾರುತವು “ಅತ್ಯಂತ ತೀವ್ರ ಚಂಡಮಾರುತ” ದಿಂದ “ತೀವ್ರವಾದ ಚಂಡಮಾರುತ”ವಾಗಿ ದುರ್ಬಲಗೊಂಡಿದೆ. ಗಂಟೆಗೆ 100-110 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ವೇಗವು ಗಂಟೆಗೆ 120 ಕಿ.ಮೀವರೆಗೆ ಹೆಚ್ಚಳವಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
ಚೆನ್ನೈನ ಮರೀನಾ ಬೀಚ್ನಲ್ಲಿ ಗಾಳಿಯ ವೇಗ ಹೆಚ್ಚಾಗಿದ್ದು, ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ. ಕಡಲೂರು, ಮಾಮಲಾಪುರಂ, ತಿರುವನೂರಿನಲ್ಲೂ ಮಳೆಯಾಗ್ತಿದ್ದು, ಗಾಳಿಯ ವೇಗಕ್ಕೆ ಅಲ್ಲಲ್ಲಿ ಮರಗಳು ಧರೆಗುರುಳಿವೆ. ಇಂದು ಸಂಜೆಯವರೆಗೂ ಇದೇ ರೀತಿ ಮಳೆ ಆಗೋ ಸಾಧ್ಯತೆಯಿದೆ ಎನ್ನಲಾಗಿದೆ. ತಗ್ಗು ಪ್ರದೇಶಗಳ 1.5 ಲಕ್ಷದಷ್ಟು ಜನರನ್ನ ಸ್ಥಳಾಂತರಿಸಲಾಗಿದೆ. ತಮಿಳುನಾಡು ಸರ್ಕಾರ 1,516 ಪರಿಹಾರ ಕೇಂದ್ರಗಳನ್ನ ತೆರೆದಿದೆ. ಸರ್ಕಾರದಿಂದ 4000 ಸ್ಥಳಗಳನ್ನ ಅಪಾಯಕಾರಿ ಎಂದು ಗುರುತು ಮಾಡಲಾಗಿದೆ.
ಪುದುಚೇರಿಗೂ ನಿವಾರ್ ಚಂಡಮಾರುತ ಅಪ್ಪಳಿಸಿದೆ. ಈಗಾಗಲೇ ಭಾರೀ ಪ್ರಮಾಣದ ಗಾಳಿ-ಮಳೆ ಆರಂಭವಾಗಿದ್ದು, 1 ಸಾವಿರಾರಕ್ಕೂ ಹೆಚ್ಚು ಮಂದಿಯನ್ನು ಪುದುಚೇರಿ ಸರ್ಕಾರ ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಿದೆ. ಇದರ ಜೊತೆಗೆ ಹಲವು ಸುರಕ್ಷತಾ ಕ್ರಮಗಳಿಗೂ ಮುಂದಾಗಿದೆ. ದೊಡ್ಡ ಪ್ರಮಾಣದಲ್ಲಿ ಜನ ಸೇರುವುದಕ್ಕೆ ಪಾಂಡಿಚೇರಿ ಸರ್ಕಾರ ನಿರ್ಬಂಧ ವಿಧಿಸಿದ್ದು, ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೆ ಜನರು ಸಂಚಾರ ಮಾಡಬಾರದು ಎಂದಿದೆ. ಅಂಗಡಿ ಮತ್ತು ಇತರೆ ಸೇವೆಗಳು ಕೂಡ ತಾತ್ಕಾಲಿಕವಾಗಿ ಅಲಭ್ಯಗಲಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಸರ್ಕಾರ ಅವಕಾಶ ನೀಡಿದೆ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post