ಡಿಯೇಗೋ ಮರಡೋನಾ ಅವರು ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಾಲ್ಚೆಂಡಿನ ಆಟದ ಲೋಕದಲ್ಲಿ ಮಿಂಚಿ ಅತ್ಯಂತ ಕಲರ್ಫುಲ್ ಲೈಪ್ ಎಂಜಾಯ್ ಮಾಡಿದ್ದ ಮರಡೋನಾ ಇನ್ನು ನೆನಪು ಮಾತ್ರ. ಫುಟ್ಬಾಲ್ ಇತಿಹಾಸದಲ್ಲಿ ಐತಿಹಾಸಿಕ ಸಾಧನೆ ಮಾಡಿರುವ ಮರಡೋನಾರ ಬದುಕಲ್ಲಿ ಹಲವು ಸ್ವಾರಸ್ಯಕರ ಘಟನೆಗಳು, ವಿವಾದಾತ್ಮಕ ಘಟನೆಗಳು ನಡೆದು ಹೋಗಿದ್ದವು.
ಸಾಮಾನ್ಯವಾಗಿ ಮರಡೋನಾ ಅಂದ ಕೂಡಲೇ ನೆನಪಾಗೋದೇ ಒಂದು ಫುಟ್ಬಾಲ್.. ಇನ್ನೊಂದು ಅವರ ವಿವಾದತ್ಮಕ ಬದುಕುಗಳು ನೆನಪಾಗುತ್ತವೆ. ಫುಟ್ಬಾಲ್ ಜಗತ್ತಿನ ಬ್ಯಾಡ್ ಬ್ಯಾಯ್ ಎಂದೇ ಕರೆಸಿಕೊಳ್ತಿದ್ದ ಮರಡೋನಾ ಅವರನ್ನ ‘ದೋಷಪೂರಿತ ಪ್ರತಿಭೆ’ ಅಂದವರೂ ಇದ್ದಾರೆ. ಹೀಗಿದ್ದೂ ಅವರನ್ನ ಬೆಂಬಲಿಸುವವರ ಸಂಖ್ಯೆ ಮಾತ್ರ ಲೆಕ್ಕಕ್ಕೆ ಸಿಗಲ್ಲ. ಅದಕ್ಕೆ ಕಾರಣ ಅವರ ಮಿಂಚಿನ ಆಟ, ಅವರಿಗಿದ್ದ ಅತ್ಯದ್ಭುತ ಪ್ರತಿಭೆ.
1986ರಲ್ಲಿ ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ನಡುವಿನ ಕ್ವಾರ್ಟರ್-ಫೈನಲ್ ಪಂದ್ಯದ ವೇಳೆ ಅವರು ವಿವಾದಾತ್ಮಕ ಗೋಲ್ ಒಂದನ್ನ ಗಳಿಸಿದರು. ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ವಿವಾದಾತ್ಮಕ ಗೋಲು ಇದಾಗಿದೆ ಅಂತಾ ಹೇಳಲಾಗುತ್ತದೆ. ಗೋಲ್ ಕೀಪರ್ ಪೀಟರ್ ಶಿಲ್ಟನ್‌ನನ್ನು ದಾಟಿದ ಅವರು ತಮ್ಮ ಕೈಯಿಂದ ಚೆಂಡನ್ನ ಹೊಡೆದು ಗೋಲ್ ಮಾಡಿದ್ದರು ಅದನ್ನ ಅವರು ಹ್ಯಾಂಡ್ ಆಫ್ ಗಾಡ್ ಅಂತಾ ಕರೆದಿದ್ರು.
ಮಾದಕ ವಸ್ತುಗಳ ಚಟಕ್ಕೆ ಬಿದ್ದಿದ್ದರಿಂದ ತಮ್ಮ ವೃತ್ತಿ ಜೀವನದಲ್ಲಿ ಸ್ವಲ್ಪ ಏರುಪೇರು ಅನುಭವಿಸಿದರು. 1982ರಲ್ಲಿ ಮಾದಕ ದ್ರವ್ಯ ವಸ್ತುಗಳನ್ನ ಸೇವನೆ ಮಾಡಿ ಸಿಕ್ಕಿಹಾಕಿಕೊಂಡರು. 1991ರಲ್ಲೂ ಸಿಕ್ಕಿಬಿದ್ದರು. ಇದರಿಂದ 15 ತಿಂಗಳ ಕಾಲ ನಿಷೇಧಕ್ಕೆ ಒಳಗಾದರು. ಅಲ್ಲದೇ 1994ರ ಫುಟ್ಬಾಲ್ ವಿಶ್ವಕಪ್ನಲ್ಲಿ ಡ್ರಗ್ಸ್ ಸೇವಿಸಿರೋದು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನ ಮನೆಗೆ ಕಳುಹಿಸಲಾಗಿತ್ತು.
ಅಂದ್ಹಾಗೆ ಮರಡೋನಾ 1983ರಲ್ಲಿ ಸ್ಪೇನ್ಗೆ ತೆರಳಿದ್ದರು. ಅಲ್ಲಿಂದ ದುಶ್ಚಟಗಳಿಗೆ ದಾಸರಾಗಿದ್ದರು ಅಂತಾ ಹೇಳಲಾಗುತ್ತದೆ. ಒಮ್ಮೆ ಮಾದಕ ವಸ್ತುಗಳಿಗೆ ಅಡಿಕ್ಟ್ ಆದ ಮರಡೋನಾ ಅವರು, ಅದರಿಂದ ಹೊರ ಬರಲಾಗದೇ ಪರದಾಡಿದರು. ಇದರ ಪರಿಣಾಮ ಇತ್ತೀಚೆಗಿನ ದಿನಗಳಲ್ಲಿ ಅವರ ತೂಖ 130 ಕೆಜಿಯಿಂದ ವಿಪರೀತ ಏರಿಕೆ ಕಂಡಿತ್ತು. ಇದರ ಪರಿಣಾಮ ಆರೋಗ್ಯ ಸಮಸ್ಯೆಯನ್ನ ಎದುರಿಸಿದರು. 2007 ಹೆಪಟೈಟಸ್ಗೆ ಚಿಕಿತ್ಸೆಗೆ ಒಳಗಾಗದ ಅವರು, ಕೊನೆಗೆ ಗ್ಯಾಸ್ಟ್ರಿಕ್ಟ್ ಸಮಸ್ಯೆ ಹಿನ್ನೆಲೆಯಲ್ಲಿ ಬೈಪಾಸ್ ಸರ್ಜರಿಗೆ ಒಳಗಾಗಿದ್ದರು. ಅಲ್ಲದೆ 2019 ರಲ್ಲಿ ಹೊಟ್ಟೆಯೊಳಗೆ ಇವರಿಗೆ ರಕ್ತಸ್ರಾವ ಕೂಡ ಸಂಭವಿಸಿತ್ತು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post