ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಡಿಯೇಗೋ ಮರಡೋನಾ ಹೃದಯಾಘಾತದಿಂದ ನಿಧನರಾಗಿರುವ ಬಗ್ಗೆ ಅವರ ವಕೀಲರು ಸ್ಪಷ್ಟಪಡಿಸಿದ್ದಾರೆ. ನೆಚ್ಚಿನ ಆಟಗಾರನ ನಿಧನಕ್ಕೆ ಪುಟ್ಬಾಲ್ ಅಭಿಮಾನಿಗಳು ಸಂತಾಪ ಸೂಚಿಸಿದ್ದು, ಅರ್ಜೆಂಟೀನಾದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆಯನ್ನ ಘೋಷಿಸಲಾಗಿದೆ.
ಮರಡೋನಾ ಫುಟ್ಬಾಲ್ ಅಂಗಣದಲ್ಲಿ ಮಿಂಚಿದ ತಾರೆಯಾಗಿದ್ದು, ಅವರ ಜೀವನ ಯುವ ಕ್ರೀಡಾಪಟುಗಳಿಗೆ ಮಾದರಿಯಾಗಿದೆ. ಮರಡೋನಾ 1986ರ ಪುಟ್ಬಾಲ್ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಒಬ್ಬ ತಂಡದ ನಾಯಕನಾಗಿ ಉಳಿದ ಆಟಗಾರರಿಗೆ ಪುಟ್ಬಾಲ್ ಅಂಗಳದಲ್ಲಿ ಅವರು ನೀಡಿದ ಪ್ರೋತ್ಸಾಹ ಹಾಗೂ ಆಟಗಾರನ ಚತುರತನದಿಂದ ವಿಶ್ವಕಪ್ ಗೆಲ್ಲಲು ಸಾಧ್ಯವಾಯಿತು.
ಡಿಯಾಗೋ ಮೆರಡೋನಾ ಅಕ್ಟೋಬರ್ 30ರಂದು ವಿಲ್ಲಾ ಫಿಯೋರಿಟೊ ಎಂಬ ಬ್ಯೂನಸ್ ಐರ್ಸ್ ನಗರದ ಹೊರವಲಯದಲ್ಲಿ ಜನಿಸಿದರು. ಇವರ ತಮ್ಮಂದಿರೂ ಕೂಡ ಫುಟ್‌ಬಾಲ್ ಆಟಗಾರರಾಗಿದ್ದು, ಇವರಿಗೆ ಮೂರು ಜನ ಅಕ್ಕಂದಿರ ಮೊದಲ ಮುದ್ದಿನ ತಮ್ಮನಾಗಿದ್ದರು. ಮೆರಡೋನಾ 10 ವರ್ಷದಲ್ಲಿದ್ದಾಗಲೇ ಎಸ್ಟ್ರೆಲ್ಲಾ ರೋಜ ಎಂಬ ಹತ್ತಿರದ ಕ್ಲಬ್‌ನಲ್ಲಿ ಆಟ ಆರಂಭಿಸಿದ್ದು, ನಂತರದ ದಿನಗಳಲ್ಲಿ ಇಡೀ ಜಗತ್ತು ಮೆಚ್ಚಿದ ಶ್ರೇಷ್ಠ ಆಟಗಾರನಾಗಿ ಗುರುತಿಸಿಕೊಂಡಿದ್ದರು.
ಪುಟ್ಬಾಲ್ ಅಂಗಳದಲ್ಲಿ ಮರಡೋನಾ
ತಮ್ಮ 15ನೇ ವರ್ಷದಲ್ಲಿ ಮೆರಡೋನಾ ಅರ್ಜೆಂಟಿನೋಸ್ ಜೂನಿಯರ್ಸ್ ತಂಡದಲ್ಲಿ ಪದಾರ್ಪಣೆ ಮಾಡಿ 1976 ರಿಂದ 1981ಅಲ್ಲೇ ಆಡಿದ್ದರು. ಹದಿನೆಂಟನೇಯ ವಯಸ್ಸಿನಲ್ಲಿ ‘ಫುಟ್‍ಬಾಲ್ ವರ್ಲ್ಡ್ ಯೂತ್ ಚಾಂಪಿಯನ್‍ಶಿಪ್’ ಪಂದ್ಯಾವಳಿಯಲ್ಲಿ ಅರ್ಜೆಂಟೀನಾ ದೇಶದ ಪರವಾಗಿ ಆಡಿದರಲ್ಲದೇ, ಫನಲ್ ಪಂದ್ಯದಲ್ಲಿ ಸೋವಿಯತ್ ಒಕ್ಕೂಟ ತಂಡದ ವಿರುದ್ಧ 3-1 ಅಂತರದಲ್ಲಿ ಜಯ ಸಾಧಿಸಲು ಕಾರಣರಾಗಿದ್ದರು.
1982ರಲ್ಲಿ ತಮ್ಮ ಮೊದಲ ವಿಶ್ವಕಪ್ ಪಂದ್ಯವನ್ನಾಡಿದ್ದ ಮರಡೋನಾ ಅಂತಾರಾಷ್ಟ್ರಿಯ ವೃತ್ತಿ ಜೀವನದಲ್ಲಿ ತಮ್ಮ ದೇಶವನ್ನು 91 ಬಾರಿ ಪ್ರತಿನಿಧಿಸಿ ಅಟ್ಯಾಕಿಂಗ್ ಮಿಡ್‌ಫೀಲ್ಡರ್ ಒಟ್ಟು 34 ಗೋಲ್‌ಗಳನ್ನು ಬಾರಿಸಿದ್ದಾರೆ. 2008-10ರವರೆಗೆ ಅರ್ಜೆಂಟೀನಾ ಫುಟ್ಬಾಲ್ ತಂಡದ ಕೋಚ್ ಆಗಿಯೂ ಕೆಲಸ ಮಾಡಿದ್ದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post