ಉಡುಪಿ: ಮಂಗಳೂರು ವಿಮಾನ ನಿಲ್ದಾಣಕ್ಕೆ ಶ್ರೀ ಮಧ್ವ ಶಂಕರ ವಿಮಾನ ನಿಲ್ದಾಣ ಹೆಸರಿಡುವಂತೆ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಗಳು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸುಗುಣೇಂದ್ರ ತೀರ್ಥ ಶ್ರೀಗಳು ಮಂಗಳೂರು ಸಮೀಪದಲ್ಲಿ ಉಡುಪಿ ಹಾಗೂ ಶೃಂಗೇರಿ ಕ್ಷೇತ್ರವಿದೆ. ಜಗದ್ಗುರು ಶಂಕರಾಚಾರ್ಯರು ಶೃಂಗೇರಿ, ಮಧ್ವಾಚಾರ್ಯರು ಉಡುಪಿ ಕೃಷ್ಣ ಮಠ ಸ್ಥಾಪಿಸಿದ್ದಾರೆ. ಹೀಗಾಗಿ ಶ್ರೀ ಮಧ್ವ ಶಂಕರ ವಿಮಾನ ನಿಲ್ದಾಣ ಎಂದು ಹೆಸರಿಡುವುದು ಅರ್ಥ ಪೂರ್ಣ. ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಶ್ರೀರಾಮನ ಹೆಸರಿಡಲಾಗಿದೆ. ಇಲ್ಲಿ ಮಧ್ವ ಶಂಕರ ಹೆಸರಿಟ್ಟರೆ ದಾರ್ಶನಿಕ ಪರಂಪರೆಗೆ ಗೌರವ ಸಂದಂತೆ. ಆಧ್ಯಾತ್ಮಿಕತೆಯೇ ಭಾರತದ ಮೂಲ ಸಂಪತ್ತು ಮಂಗಳೂರು ವಿಮಾನ ನಿಲ್ದಾಣಕ್ಕೆ ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಹೆಸರಿಡುವಂತೆ ಒತ್ತಾಯ ಕೇಳಿಬರುತ್ತಿದೆ. ಈ ಹಿನ್ನಲೆ ಶ್ರೀ ಮಧ್ವ ಶಂಕರ ಹೆಸರಿಡುವಂತೆ ಒತ್ತಾಯಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post