ತುಮಕೂರು: ನಾನೇಕೆ ಸಚಿವ ಸ್ಥಾನ ತ್ಯಾಗ ಮಾಡಲಿ? ನಾನೊಬ್ಬಳೆ ಮಹಿಳಾ ಮಂತ್ರಿ ಇರೋದು ಅಂತಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಪ್ರಶ್ನೆ ಮಾಡಿದ್ದಾರೆ.
ತುಮಕೂರಿನಲ್ಲಿ ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಮಾತನಾಡಿದ ಶಶಿಕಲಾ ಜೊಲ್ಲೆ.. ಸಂಘಟನೆ ಮೂಲಕ ಬಂದು ಸಾಕಷ್ಟು ಕೆಲಸ ಮಾಡಿದ್ದೇನೆ. ರಾಜ್ಯ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದೇನೆ. ನಾನೇಕೆ ಸಚಿವ ಸ್ಥಾನ ತ್ಯಾಗ ಮಾಡಲಿ? ಸಚಿವ ಸ್ಥಾನದ ಬಗ್ಗೆ ರಾಜ್ಯ ಅಥವಾ ರಾಷ್ಟ್ರದ ನಾಯಕರಿಂದ ನನಗೆ ಯಾವುದೇ ಸೂಚನೆ ಬಂದಿಲ್ಲ ಅಂತಾ ಹೇಳಿದರು.
ಆದರೆ ಮಾಧ್ಯಮಗಳು ಸಚಿವ ಸ್ಥಾನ ಕೈತಪ್ಪುತ್ತೆ ಎಂದು ಹೇಳುತ್ತಿವೆ. ಕಳೆದ 2 ಬಾರಿಯೂ ಇದೇ ರೀತಿ ಹೇಳಿದ್ದವು. ಆದರೆ ಅದು ಸುಳ್ಳಾಗಿತ್ತು. ಈ ಬಾರಿಯೂ ಅದೇ ಆಗುತ್ತದೆ. ಈ ಬಗ್ಗೆ ವರಿಷ್ಠರಿಂದ ಒತ್ತಡ ಬಂದರೆ ಆಮೇಲೆ ನೋಡೋಣ. ನಾನು, ಸಮರ್ಪಕವಾಗಿ ಕೆಲಸ ಮಾಡುತ್ತಿದ್ದೇನೆ. ಲಾಕ್ಡೌನ್ ವೇಳೆಯಲ್ಲಿ ರಾಜ್ಯದಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗಿವೆ. ತುಮಕೂರು ಜಿಲ್ಲೆಯಲ್ಲೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ಇದಕ್ಕೆ ಕಾರಣ ಶಿಕ್ಷೆ ಕುರಿತು ಅಧಿಕಾರಗಳ ಸಭೆ ನಡೆಸುತ್ತೇನೆ ಎಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post