ಕೊರೊನಾದಿಂದ ಬಂದ್ ಆಗಿರುವ ಅಂತರಾಷ್ಟ್ರೀಯ ವಿಮಾನ ಸಂಚಾರ ಡಿಸೆಂಬರ್ 31ರವರೆಗೂ ಬಂದ್ ಆಗಿರಲಿದೆ ಅಂತ ನಾಗರಿಕ ವಿಮಾನಯಾನ ನಿರ್ದೇಶನಾಲಯ ಆದೇಶ ಹೊರಡಿಸಿದೆ.
ಕಾರ್ಗೋ ಅಥವಾ ಸರಕು ವಿಮಾನಗಳು ಮತ್ತು ಕೇಸ್ ಟು ಕೇಸ್ ಬೇಸಿಸ್ ಮೇಲೆ DGCA ಅನುಮತಿ ನೀಡಿರುವ ವಿಮಾನಗಳನ್ನ ಹೊರತು ಪಡಿಸಿ ಬೇರೆ ಯಾವುದೇ ವಿಮಾನ ಭಾರತದಿಂದ ವಿದೇಶಕ್ಕೆ ಸಂಚರಿಸುವಂತಿಲ್ಲ. ಮತ್ತು ಭಾರತದಲ್ಲಿ ಯಾವುದೇ ವಿದೇಶಿ ವಿಮಾನಗಳು ಲ್ಯಾಂಡ್ ಆಗುವಂತಿಲ್ಲ ಎಂದು DGCA ಪ್ರಕಟಣೆ ಹೊರಡಿಸಿದೆ.
ಆದ್ರೆ ಭಾರತ ಕೆಲವೊಂದು ದೇಶಗಳೊಂದಿಗೆ ಏರ್ ಬಬಲ್ ವ್ಯವಸ್ಥೆ ಅಡಿಯಲ್ಲಿ ವಿಮಾನ ಸಂಚಾರ ಆರಂಭಿಸಿದೆ. ಇಂತಹ ವಿಮಾನಗಳು ಹಾಗೂ ವಂದೇ ಭಾರತ್ ಮಿಷನ್ ಅಡಿಯಲ್ಲಿ ಸಂಚರಿಸುತ್ತಿರುವ ವಿಷೇಶ ವಿಮಾನಗಳಿಗೆ ವಿನಾಯತಿ ನೀಡಲಾಗಿದ್ದು, ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post