ಚಿಕ್ಕಬಳ್ಳಾಪುರ: ಚಳಿ ಕಾಯಿಸಲು ಹಾಕಿದ್ದ ಬೆಂಕಿ ಹೊಗೆಯಿಂದಾಗಿ ಉಸಿರುಗಟ್ಟಿ ಒಂದೇ ಕುಟುಂಬದ ನಾಲ್ವರು ಅಸ್ವಸ್ತರಾಗಿದ್ದು, ಒಬ್ಬರು ಮೃತಪಟ್ಟಿರುವ ಘಟನೆ ಮಂಚೇನಹಳ್ಳಿ ತಾಲೂಕಿನ ಮರಾಠಿ ಪಾಳ್ಯ ಗ್ರಾಮದಲ್ಲಿ ನಡೆದಿದೆ. ಅರ್ಚನ(16) ಮೃತಪಟ್ಟವರು.
ಗ್ರಾಮದ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಈ ಕುಟುಂಬ ಕಾರ್ಯನಿರ್ವಹಿಸುತ್ತಿತ್ತು. ರಾತ್ರಿ ಚಳಿಯಾಗಿದ್ದ ಕಾರಣ ಚಳಿ ಕಾಯಿಸಲು ಬೆಂಕಿ ಹಚ್ಚಿದ್ದರು. ಬೆಂಕಿ ಕಾದ ನಂತರ ಎಲ್ಲರೂ ಹೋಗಿ ಮಲಗಿದ್ದಾರೆ. ಈ ವೇಳೆ ದಟ್ಟವಾದ ಹೊಗೆ ಆವರಿಸಿದ ಕಾರಣ ಆ ಹೊಗೆಗೆ ಉಸಿರುಗಟ್ಟಿ ಅರ್ಚನ ಮೃತಪಟ್ಟಿದ್ದಾರೆ.
ಅರ್ಚನ ತಂದೆ ವೀರಾಂಜನೇಯ, ತಾಯಿ ಶಾಂತಮ್ಮ, ಮತ್ತು ಸಹೋದರಿ ಅಸ್ವಸ್ಥರಾಗಿದ್ದು, ಅವರನ್ನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಇನ್ಸ್ಪೆಕ್ಟರ್ ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post