ಚಿಕ್ಕಮಗಳೂರು: ಕಳಸದಲ್ಲಿ ಲೈನ್ ಮನೆಯ ಬಾತ್ ರೂಂನಲ್ಲಿದ್ದ ಸುಮಾರು12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗತಜ್ಞರು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಗ್ರಾಮದ ಅಂಬಿನಕುಡಿಗೆ ಅನಂತವರಾವ್ ಎಂಬುವವರ ಲೈನ್ ಮನೆಯ ಬಾತ್ರೂಂನಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಅದನ್ನು ನೋಡಿ ಅವರ ಪತ್ನಿ ಕೂಗುತ್ತಾ ಓಡಿಬಂದಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉರಗ ತಜ್ಞ ರಿಜ್ವಾನ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಸತತ 3 ಗಂಟೆ ಕಾರ್ಯಾಚರಣೆ ನಡೆಸಿ ಸರ್ಪವನ್ನು ಸೆರೆಹಿಡಿದಿದ್ದಾರೆ.
ನಂತರ ಸರ್ಪವನ್ನು ಕಳಸ ಅರಣ್ಯ ಸಿಬ್ಬಂದಿ ನೇತೃತ್ವದಲ್ಲಿ ಕುದುರೆಮುಖ ಅರಣ್ಯಕ್ಕೆ ಬಿಟ್ಟುಬರಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post