ಗದಗ: ಮಿತ್ರಮಂಡಳಿಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಅಂತಾ ಸಚಿವ ಬಿಸಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಶಾಸಕ ಮಿತ್ರಮಂಡಳಿಯಲ್ಲಿ ಭಿನ್ನಾಭಿಪ್ರಾಯ ವಿಚಾರವಾಗಿ ಮಾತನಾಡಿ.. ನಮ್ಮ ಯಾವುದೇ ಭಾಗವಿಲ್ಲ. ಅನ್ಯಪಕ್ಷ ಬಿಟ್ಟು ಬಿಜೆಪಿಗೆ ಬಂದ ಶಾಸಕರಿಗೆ ಶೀಘ್ರದಲ್ಲೇ ಸೂಕ್ತ ಸ್ಥಾನ ಮಾನ ಸಿಗುತ್ತದೆ ಎಂದಿದ್ದಾರೆ.
ಇನ್ನು ಕೆಲವರಿಗೆ ಈಗಾಗಲೇ ಸಿಕ್ಕಿದೆ, ಎಂಟಿಬಿ ನಾಗರಾಜ್, ಶಂಕರ್, ಮುನಿರತ್ನ, ಪ್ರತಾಪ್ಗೌಡ ಅವರಿಗೆ ಸೂಕ್ತವಾದ ಸ್ಥಾನ ಮಾನ ಸಿಗಬೇಕು, ಆದಷ್ಟು ಬೇಗ ಸಿಗುತ್ತದೆ. ಯಡಿಯೂರಪ್ಪ ಏನು ಮಾತು ಕೊಟ್ಟಿದ್ರು ಆ ಪ್ರಕಾರ ನಡೆದುಕೊಂಡು ಬಂದಿದ್ದಾರೆ. ಚುನಾವಣೆಯಲ್ಲಿ ಸೋತವರನ್ನ ಎಂಎಲ್ಸಿಗಳನ್ನಾಗಿ ಮಾಡಿದ್ದಾರೆ. ಮಂತ್ರಿಮಂಡಲದಲ್ಲಿ ಅವಕಾಶ ಕೊಡುವ ಭರವಸೆ ಇದೆ. ಎಂಟಿಬಿ ಅವರು ಮಂತ್ರಿಯಾಗಿ ಬಿಟ್ಟು ಬಂದವರು ಹಾಗಾಗಿ ಅವರು ಬಹಿರಂಗವಾಗಿ ಅಸಮಾಧಾನ ಗೊಂಡಿದ್ದಾರೆ. ಅವರಿಗೂ ಸೂಕ್ತವಾದ ಸ್ಥಾನಮಾನ ನೀಡ್ತಾರೆ ಎನ್ನುವ ಭರವಸೆ ಇದೆ ಎಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post