ಚಿಕ್ಕಬಳ್ಳಾಪುರ: ಬುರೆವಿ ಚಂಡಮಾರುತದ ಹಿನ್ನೆಲೆ ತುಂತುರ ಮಳೆ ಸುರಿದು ಟೊಮೇಟೋ ಬೆಳೆ ನಾಶವಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಕೆಲವು ರೈತರು ಕೊಳೆಯುತ್ತಿರುವ ಟೊಮೇಟೋವನ್ನ ಲೋಡ್ಗಟ್ಟಲೆ ತಂದು ಗುಂಡಿಗೆ ಸುರಿಯುತ್ತಿದ್ದಾರೆ.
ಬಾಗೇಪಲ್ಲಿ ತಾಲ್ಲೂಕಿನ ಕಾಶಾಪುರ ಗ್ರಾಮದ ಹೊರವಲಯದಲ್ಲಿ ಟನ್ಗಟ್ಟಲೇ ಟೊಮೇಟೋ ಮಣ್ಣುಪಾಲಾಗಿದೆ. ಟೊಮೇಟೋಗೆ ಬೆಲೆ ಇದ್ದರೂ ಮಾರಾಟ ಮಾಡಲಾರದ ಪರಿಸ್ಥಿತಿ ಎದುರಾಗಿದೆ. 15 ಕೆ.ಜಿಯ ಒಂದು ಕ್ರೇಟ್ ಟೊಮೇಟೋಗೆ 250 ರೂಪಾಯಿ ದರ ಇದ್ದರೂ ಸಹ ಪ್ರಯೋಜನವಾಗಿಲ್ಲ . ರೈತರ ತೋಟಗಳಲ್ಲೇ ಟೊಮೇಟೋ ಹಣ್ಣುಗಳು ಕೊಳೆಯುತ್ತಿವೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post