ಕೋಲಾರ: ಮಾಜಿ ಸಿಎಂ ಕುಮಾರಸ್ವಾಮಿ ಪುಟಗೋಸಿ ರಾಜಕಾರಣ ಮಾಡಲು ಇದ್ದರೆ ಎಂದಿದ್ದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ಗೆ ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದು, ಚಿಲ್ಲರೆಗಳಿಗೆ ಉತ್ತರ ಕೊಡಲು ಆಗಲ್ಲ ಎಂದು ಕಿಡಿಕಾರಿದ್ದಾರೆ.
ನನ್ನ ಬಗ್ಗೆ ರೈತ ಮುಖಂಡರು ಮಾತನಾಡುವಾಗ ಎಚ್ಚರಿಕೆಯಿಂದ ಮಾತಾಡಲಿ. ಎಲ್ಲವನ್ನು ನಿಮ್ಮಿಂದ ಹೇಳಿಸಿಕೊಳ್ಳಬೇಕಿಲ್ಲ. ರೈತಪರ ಸಾಕಷ್ಟು ಯೋಜನೆಗಳನ್ನ ತಂದ ವೇಳೆ ಒಬ್ಬರು ಕೃತಜ್ಞತೆ ಹೇಳಿಲ್ಲ. ನನ್ನ ವಿರುದ್ಧ ಮಾತನಾಡೋ ಕೋಡಿಹಳ್ಳಿ ಚಂದ್ರಶೇಖರ್ ಹಿನ್ನೆಲೆ ಏನು? ಹೋರಾಟ ಹೇಗೆ ಬಂದ ದಾರಿ ಎಲ್ಲಾ ಗೊತ್ತಿದೆ ಎಂದರು.
ನನಗೆ ಸಲಹೆ ಕೊಡುವಷ್ಟು ವ್ಯಕ್ತಿ, ಅವರಿಂದ ಬುದ್ಧಿ ಕಲಿಯುವ ಅವಶ್ಯಕತೆ ನನಗಿಲ್ಲ. ನಾನು ರೈತ ಕುಟುಂಬದಿಂದ ಬಂದ ವ್ಯಕ್ತಿ. ನೀವು ರೈತರ ಹೆಸರಲ್ಲಿ ಡೋಂಗಿ ಮುಖಂಡರಾಗಿದ್ದೀರಿ. ಮೊದಲು ನಿಮ್ಮ ಹುಳುಕು ಮುಚ್ಚಿಕೊಳ್ಳಿ. ನಿಮ್ಮಿಂದ ಹೇಳಿಸಿಕೊಳ್ಳಬೇಕಾಗಿಲ್ಲ ಎಂದು ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post