ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ‘ಫ್ಯಾಂಟಮ್’ ಚಿತ್ರದ ಶೂಟಿಂಗ್ ಕೊನೆಯ ಹಂತಕ್ಕೆ ಬಂದು ತಲುಪಿದೆ. ಸದ್ಯ ಕೇರಳದಲ್ಲಿ ಅಂತಿಮ ಶೆಡ್ಯೂಲ್ ಶೂಟ್ಗೆ ತೆರಳಿರುವ ಚಿತ್ರತಂಡ, ಇಂದಿನಿಂದ ಚಿತ್ರೀಕರಣ ಶುರು ಮಾಡಿಕೊಂಡಿದೆ. ಈ ಬಗ್ಗೆ ‘ಫ್ಯಾಂಟಮ್’ ವಿಕ್ರಾಂತ್ ರೋಣ ಪಾತ್ರಧಾರಿ ನಟ ಕಿಚ್ಚ ಸುದೀಪ್ ಖುಷಿಯಿಂದ ಟ್ವೀಟ್ ಮಾಡಿದ್ದಾರೆ.
‘ದಿ ವರ್ಲ್ಡ್ ಆಫ್ ಫ್ಯಾಂಟಮ್ನ ಕೊನೆಯ ಹಂತದ ಚಿತ್ರೀಕರಣ ಶುರುವಾಗಿದೆ. ಇಲ್ಲಿನ ಲೊಕೇಷನ್ಸ್ ಹಾಗೂ ಚಿತ್ರೀಕರಣಕ್ಕಾಗಿ ಹಾಕಿರುವ ಸೆಟ್ಗಳು ನನಗೆ ಬಹಳ ಖುಷಿ ಕೊಡ್ತಿವೆ ಅಂತ ಅಭಿಮಾನಿಗಳಲ್ಲಿ ತಮ್ಮ ಖುಷಿಯನ್ನ ಹಂಚಿಕೊಂಡಿದ್ದಾರೆ.
ಇನ್ನು, ಅನೂಪ್ ಭಂಡಾರಿ ಸಾರಥ್ಯದ ‘ಫ್ಯಾಂಟಮ್’ ಸಿನಿಮಾ ತಂಡ ಸದ್ಯ ಕೇರಳದಲ್ಲಿ ಶೂಟಿಂಗ್ ಮುಗಿಸಿ ಅನಂತರ ಬೆಂಗಳೂರಿಗೆ ಬಂದು ಇಲ್ಲಿ ಒಂದು ಸ್ಪೆಷಲ್ ಹಾಡು ಹಾಗೂ ನಾಲ್ಕು ದಿನಗಳ ಚಿತ್ರೀಕರಣ ಮಾಡಲಿದೆ. ಅಲ್ಲಿಗೇ.. ‘ಫ್ಯಾಂಟಮ್’ ಸಿನಿಮಾ ತಂಡ ಕುಂಬಳಕಾಯಿ ಹೊಡೆಯಬಹುದು. ‘ಫ್ಯಾಂಟಮ್’ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದ್ದು, ಬೇಡಿಕೆ ಇರುವಂತ ಎಲ್ಲಾ ಭಾಷೆಗಳಲ್ಲಿ ಸಿನಿಮಾವನ್ನ ತೆರೆಗೆ ತರುವ ಪ್ರಯತ್ನದಲ್ಲಿದೆ ಅನೂಪ್ ಭಂಡಾರಿ ಟೀಂ. ನಟ ಕಿಚ್ಚ ಸುದೀಪ್ಗೆ ಜೊತೆಯಾಗಿ ನಿರೂಪ್ ಭಂಡಾರಿ, ನೀತಾ ಅಶೋಕ್ ‘ಫ್ಯಾಂಟಮ್’ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ತಿದ್ದಾರೆ.
Last schedule of #TheWorldOfPhantom begins.
Love the locations and the sets built around the existing structures. https://t.co/TLzIEdgLgX pic.twitter.com/2t4xdL4EGM— Kichcha Sudeepa (@KicchaSudeep) December 9, 2020
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post