ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಅನ್ಬರಿವ್ ಮಾಸ್ಟರ್ ಪರಿಕಲ್ಪನೆಯಲ್ಲಿ ‘ಕೆಜಿಎಫ್ ಚಾಪ್ಟರ್-2’ ಸಿನಿಮಾದ ಕೊನೆಯ ಕಾಳಗ ನಡೆಯುತ್ತಿದೆ. ಪ್ರಶಾಂತ್ ಪಡೆ ಹೈದ್ರಾಬಾದ್ನಲ್ಲಿ ಇರುವಾಗಲೇ ಸಲಾರ್ ಸಿನಿಮಾದ ಬಗ್ಗೆ ಮಾತುಕಥೆಗಳು ಜೋರಾಗಿಯೇ ಚಾಲ್ತಿಗೆ ಬಂದಿವೆ. ಹೌದು.. ಸೌಥ್ನಿಂದ ನಾರ್ಥ್ವರೆಗೂ ಸಿನಿರಸಿಕರ ಗಮನ ಸೆಳೆದಿರುವ ಸಿನಿಮಾ ‘ಸಲಾರ್.’ ಪೊಸ್ಟರ್ ಬಿಟ್ಟು ಪ್ರೇಕ್ಷಕರಲ್ಲಿ ಕುತೂಹಲದ ಕಿಚ್ಚು ಹಚ್ಚಿರುವ ಪ್ರಶಾಂತ್ ನೀಲ್ ಪಡೆ, ಈಗ ಹೀರೋಯಿನ್ಗಾಗಿ ದುರ್ಬಿನ್ ಹಾಕೊಂಡು ಹುಡ್ಕೋಕೆ ಮುಂದಾಗಿದೆ. ವಿಶೇಷ ಅಂದ್ರೆ, ಈಗಾಗಲೇ ಇಬ್ಬರು ನಟಿಮಣಿಯರ ಹೆಸರು ಕೇಳಿ ಬರ್ತಿದೆ.
ಬಾಲಿವುಡ್ನ ಬಳಕೋ ಬಳ್ಳಿ, ಸಖತ್ ಹಾಟ್ ಆ್ಯಂಡ್ ಕ್ಯೂಟ್ ದಿಶಾ ಪಟಾನಿಗೆ ಹೊಂಬಾಳೆ ಫಿಲ್ಮ್ಸ್ ತಂಡ ಬಲೆ ಬೀಸಿದೆಯಂತೆ. ಹೌದು.. ಈ ರೀತಿಯ ಸುದ್ದಿಯೊಂದು ಸೌಥ್ನಿಂದ ನಾರ್ಥ್ ತನಕ ಹಬ್ಬಿದೆ. ದಿಶಾ ಪಟಾನಿ, ಪ್ರಭಾಸ್ ಜೊತೆ ‘ಸಲಾರ್’ ಸಿನಿಮಾದಲ್ಲಿ ನಟಿಸುತ್ತಾರೆ ಅಂತ ಹೇಳಲಾಗುತ್ತಿದೆ.
ಇನ್ನು, ದಿಶಾ ಪಟಾನಿ ಹೆಸರಿನ ಜೊತೆಗೆ ‘ಸಲಾರ್’ ಹೀರೋಯಿನ್ ರೇಸ್ನಲ್ಲಿ ಸಾರಾ ಆಲಿ ಖಾನ್ ಹೆಸರು ಕೂಡ ಕೇಳಿಬರುತ್ತಿದೆ. ಆದ್ರೆ ಯಾರು ಫೈನಲ್ ಪಾರಿವಾಳ ಅನ್ನೋದೇ ಇನೇನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ‘ಕೆಜಿಎಫ್’ ಚಾಪ್ಟರ್ ಮುಗಿಯುತ್ತಿದ್ದಂತೇ, ‘ಸಲಾರ್’ ಸಿನಿಮಾದ ಶೂಟಿಂಗ್ಗೆ ರೆಡಿಯಾಗಬೇಕು ಪ್ರಶಾಂತ್ ನೀಲ್ ಪಡೆ. ಇದೇ ಕಾರಣಕ್ಕೆ ಆಡಿಷನ್ಗೆ ಸಜ್ಜಾಗಿದೆ ನೀಲ್ ಟೀಮ್.
ನಿರ್ದೇಶಕ ಪ್ರಶಾಂತ್ ನೀಲ್, ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಎಲ್ಲ ಪಾತ್ರಗಳಿಗೂ ಆಡಿಷನ್ ಕರೆಯಲಾಗಿದ್ದು, ಇಲ್ಲಿ ಯಾವುದೇ ವಯಸ್ಸಿನ ಮಿತಿ ಇಲ್ಲ. ಹಾಗಾಗಿ, ಎಲ್ಲ ವಯೋಮಾನದವರು ಕೂಡ ಆಡಿಷನ್‌ನಲ್ಲಿ ಭಾಗವಹಿಸಬಹುದಾಗಿದೆ. ಡಿ.15ರಂದು ಹೈದರಾಬಾದ್‌ನಲ್ಲಿ ಆಡಿಷನ್ ನಡೆಯಲಿದೆ. ಈ ಗ್ಯಾಪ್ನಲ್ಲಿ ಹೀರೋಯಿನ್ ಯಾರು ಅನ್ನೋದು ಫೈನಲ್ ಆಗಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post