ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ, ಕುತೂಹಲಕಾರಿ ಸಿನಿಮಾ ‘ದಿ ವರ್ಲ್ಡ್ ಆಫ್ ಫ್ಯಾಂಟಮ್’. ಅನೂಪ್ ಭಂಡಾರಿ ಈ ಚಿತ್ರಕ್ಕೆ ಓಂಕಾರ ಹಾಕಿದಾಗಿಂದಲೂ ಸೌಥ್ ಇಂಡಿಯಾದ ಸೆನ್ಸೇಷನಲ್ ಚಿತ್ರ ಆಗುವತ್ತು ಹೆಜ್ಜೆ ಇಡುತ್ತಿದೆ ‘ಫ್ಯಾಂಟಮ್.’
ಸದ್ಯ ಹೈದರಾಬಾದ್ನಲ್ಲಿ ಶೂಟಿಂಗ್ ಮುಗಿಸಿಕೊಂಡು ಈಗ ಕೇರಳದ ನಿಗೂಢ ಜಾಗದಲ್ಲಿ ಕಟ್ಟ ಕಡೆಯ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡುತ್ತಿರುವ ‘ಫ್ಯಾಂಟಮ್’ ಸಿನಿಮಾ ತಂಡ, ಹೊಸದೊಂದು ನ್ಯೂಸ್ ಕೊಟ್ಟಿದೆ. ಸೂಪರ್ಸ್ಟಾರ್ ರಜಿನಿಕಾಂತ್ ಸಿನಿಮಾ ಮಾಡಿದ್ದ ದಾಖಲೆಯನ್ನ ಹೊಸದಾಗಿ ಮಾಡಲು ಹೊರಟಿದೆ.
ವಿಶ್ವದ ಅತೀ ಎತ್ತರದ ಕಟ್ಟಡ ದುಬೈನ ಬುರ್ಜ್ ಖಲೀಫಾ ಬಿಲ್ಡಿಂಗ್. ಈ ಗಗನ ಚುಂಬಿ ಕಟ್ಟಡದ ಮುಂದೆ ನಿಂತು ಒಂದು ಸೆಲ್ಫಿ ಕ್ಲಿಕ್ಕಿಸಿಕೊಂಡ್ರೆ, ಅದೇ ಪುಣ್ಯ ಅಂತ ದುಬೈ ರಿಟರ್ನ್ಸ್ ನಂಬಿದ್ದಾರೆ. ಇದೇ ಬಿಲ್ಡಿಂಗ್ ಆವರಣದಲ್ಲಿ ಎಸ್.ಶಂಕರ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಅದ್ಧೂರಿ ವೆಚ್ಚದ ‘2.O’ ಸಿನಿಮಾದ ಆಡಿಯೋ ಲಾಂಚ್ ಆಗಿತ್ತು. ಬುರ್ಜ್ ಖಲೀಫಾದ ಮುಂದೆ ಆಡಿಯೋ ಲಾಂಚ್ ಮಾಡಿಕೊಂಡ ಪ್ರಪ್ರಥಮ ಇಂಡಿಯನ್ ಸಿನಿಮಾ ಅನ್ನೋ ಹೆಗ್ಗಳಿಕೆಗೆ ತಲೈವಾ ರಜಿನಿಕಾಂತ್ ನಟನೆಯ ‘2.0’ ಸಿನಿಮಾ ಪಾತ್ರವಾಗಿತ್ತು. ಈಗ ಅದೇ ಹಾದಿಯನ್ನ ನಮ್ಮ ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯನ್ ಸಿನಿಮಾ ‘ದಿ ವರ್ಲ್ಡ್ ಆಫ್ ಫ್ಯಾಂಟಮ್’ ಹಿಡಿಯುತ್ತಿದೆ.
ಜಾಕ್ ಮಂಜು ಅವರ ಜೊತೆಗೆ ‘ಫ್ಯಾಂಟಮ್’ ಸಿನಿಮಾದ ಮತ್ತೊಬ್ಬ ನಿರ್ಮಾಪಕರು ದುಬೈನಲ್ಲಿ ಸೆಟಲ್ ಆಗಿರುವ ಅಲಂಕಾರ್ ಪಾಂಡಿಯನ್. ಸದ್ಯ ದೊಡ್ಡ ಮಟ್ಟದ ಪ್ರಚಾರಕ್ಕಾಗಿ ಬುರ್ಜ್ ಖಲೀಫಾ ಬಿಲ್ಡಿಂಗ್ ಅವರಣದಲ್ಲಿ ‘ದಿ ವರ್ಲ್ಡ್ ಆಫ್ ಫ್ಯಾಂಟಮ್’ ಸಿನಿಮಾದ ಆಡಿಯೋ ಲಾಂಚ್ ಮಾಡಿ ವಿಶ್ವಮಟ್ಟದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ಲಾನ್ ಚಿತ್ರತಂಡದ್ದು. ಸದ್ಯ ಕ್ಲೈಮ್ಯಾಕ್ಸ್ ಶೂಟಿಂಗ್ನಲ್ಲಿ ಅನೂಪ್ ಭಂಡಾರಿ ತಂಡ ಬ್ಯುಸಿಯಾಗಿದೆ. ಈ ಕ್ಲೈಮ್ಯಾಕ್ಸ್ ನಂತರ ಒಂದು ಹಾಡಿನ ಶೂಟಿಂಗ್ ಮುಗಿಸಿದ್ರೆ ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್ಗೆ ಸಿನಿಮಾದ ಎಲ್ಲಾ ಕೆಲಸ ಕಾರ್ಯಗಳು ಮುಗಿದಂತೆ ಆಗುತ್ತದೆ. ಶೂಟಿಂಗ್ ಕಂಪ್ಲೀಟ್ ಆಗುತ್ತಿದ್ದಂತೆಯೇ, ಆಡಿಯೋ ಲಾಂಚ್ಗೆ ಅಣಿಯಾಗಲಿದೆ ‘ಫ್ಯಾಂಟಮ್’ ಟೀಂ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post