ಬೆಂಗಳೂರು: ನಾಳೆ ರಾಜ್ಯದಲ್ಲಿ ಮೊದಲ ಹಂತದ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯುತ್ತಿದೆ. ನ್ಯಾಯಸಮ್ಮತ ಹಾಗೂ ಮುಕ್ತ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಎಲ್ಲ ರೀತಿಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದೆ.
ಮೊದಲ ಹಂತದಲ್ಲಿ ಒಟ್ಟು 117 ತಾಲೂಕುಗಳಲ್ಲಿ 3,019 ಗ್ರಾಮ ಪಂಚಾಯ್ತಿ ಚುನಾವಣೆ ನಡೆಯಲಿದೆ. ಹೀಗಾಗಿ 48,048 ವಾರ್ಡ್ಗಳಲ್ಲಿ ಮತದಾನ ನಡೆಯಲಿದೆ. ಈಗಾಗಲೇ 4,377 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿರುವುದರಿಂದ ಒಟ್ಟು 1,17,387 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಚುನಾವಣೆ ಗೆಲ್ಲಲು ‘ವಾಮ’ಮಾರ್ಗಪಂಚಾಯ್ತಿ ಚುನಾವಣೆಯ ಕಾವು ಜೋರಾಗ್ತಿದ್ದಂತೆ ಗೆಲುವಿಗಾಗಿ ಅಭ್ಯರ್ಥಿಗಳು ನಾನಾ ಕಸರತ್ತು ನಡೆಸ್ತಿದ್ದಾರೆ. ಈ ನಡುವೆ ಗೆಲುವಿಗಾಗಿ ಮತಗಟ್ಟೆ ಬಳಿ ವಾಮಾಚಾರ ಮಾಡಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ತೇರದಾಳ ತಾಲೂಕಿನ ಸಸಾಲಟ್ಟಿ ಗ್ರಾಮದ ನೂತನ ಮತಗಟ್ಟೆ 48, 50ರ ಮುಂಭಾಗ ವಾಮಾಚಾರ ಮಾಡಲಾಗಿದೆ. ದೊಡ್ಡ ದೊಡ್ಡ ಚುನಾವಣೆ ವೇಳೆ ಕಂಡು ಬರುತ್ತಿದ್ದ ವಾಮಾಚಾರ ಇದೀಗ ಗ್ರಾಮ ಪಂಚಾಯತ್ ಚುನಾವಣೆಗೂ ಕಾಲಿಟ್ಟಿದೆ. ಇತ್ತ ರಾಯಚೂರಿನ ಏಗನೂರಿನಲ್ಲಿ ಅಭ್ಯರ್ಥಿಯ ಮನೆ ಮುಂದೆಯೇ ವಾಮಾಚಾರ ನಡೆದಿದೆ.
ಹೊತ್ತಿ ಉರಿದ ರೈತನ ಬಣವೆಗ್ರಾಮ ಪಂಚಾಯತ್ ಚುನಾವಣೆಯ ರಾಜಕೀಯ ದ್ವೇಷಕ್ಕೆ ರೈತನ ಶೇಂಗಾ ಬಣವೆ ಹೊತ್ತಿ ಉರಿದ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಪರಸಾಪೂರದಲ್ಲಿ ನಡೆದಿದೆ. ಹನುಮಂತ ಬೇರಗಣ್ಣವರ್ ಎಂಬ ರೈತನಿಗೆ ಸೇರಿದ ಬಣವೆ ಸುಟ್ಟು ಭಸ್ಮವಾಗಿದೆ. ಪರಸಾಪೂರ 6ನೇ ವಾರ್ಡ್ನಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹನುಮಂತನನ್ನ ಹತ್ತಿಕ್ಕಬೇಕು ಎನ್ನುವ ದೃಷ್ಟಿಯಿಂದ ಶೇಂಗಾ ಬಣವೆಗೆ ಬೆಂಕಿ ಇಟ್ಟಿದ್ದಾರೆ ಅಂತ ರೈತ ಆರೋಪಿಸಿದ್ದಾರೆ. 5 ಎಕರೆಯಲ್ಲಿ ಬೆಳೆದ ಸುಮಾರು ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಶೇಂಗಾ ಹಾಗೂ ಹೊಟ್ಟು ಬೆಂಕಿಯ ಕೆನ್ನಾಲಿಗೆ ಆಹುತಿಯಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post