ಚಿಕ್ಕಬಳ್ಳಾಪುರ: ಕೊರೊನಾ ಬಂದ ಮೇಲೆ ಜನರ ಜೀವನ ಕ್ರಮದಲ್ಲಿ ಬದಲಾವಣೆಯಾಗಿರುವುದಂತೂ ನಿಜ. ಅಲ್ಲದೇ ಜೀವ ಉಳಿಸುವ ರಕ್ತಕ್ಕೂ ಕೂಡ ಬರ ಬಂದಿದೆ. ಮೊದಲೆಲ್ಲಾ ಸಾರ್ವಜನಿಕ ರಕ್ತದಾನ ಶಿಬಿರ, ವಿದ್ಯಾರ್ಥಿಗಳ ರಕ್ತದಾನ ಶಿಬಿರ ಹೀಗೆ ಅನೇಕ ಸಮಾಜಮುಖಿ ಕಾರ್ಯಗಳಿಂದ ಬ್ಲಡ್ ಬ್ಯಾಕ್ನಲ್ಲಿ ಎಲ್ಲಾ ಗ್ರೂಪಿನ ರಕ್ತ ಸಿಗುತಿತ್ತು. ಆದ್ರೆ ಕೊರೊನಾ ಬಂದ ಮೇಲೆ ಈ ಎಲ್ಲಾ ಕಾರ್ಯಗಳಿಗೂ ಬ್ರೇಕ್ ಬಿದ್ದಿದೆ.
ಜಿಲ್ಲೆಯಲ್ಲಿ ಸಕಾಲಕ್ಕೆ ರಕ್ತ ಸಿಗದೇ ರೋಗಿಗಳ ಸಂಬಂಧಿಕರು, ಬ್ಲಡ್ ಬ್ಯಾಂಕ್ಗಳಿಗೆ ಅಲೆದಾಡುತ್ತಿದ್ದಾರೆ. ಜಿಲ್ಲೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯಿದ್ರೂ ರೋಗಿಗಳಿಗೆ ಬ್ಲಡ್ ಸಿಗ್ತಾ ಇರಲಿಲ್ಲ. ರಕ್ತ ಹುಡುಕಿಕೊಂಡು ರೆಡ್ ಕ್ರಾಸ್ ಸಂಸ್ಥೆಗೆ ಬಂದು ಬರೀಗೈಲೇ ವಾಪಸ್ ಹೋಗುವಂತಾಗಿತ್ತು.
ರಕ್ತ ಕೊಡಲು ದಾನಿಗಳಿಲ್ಲದೇ ರೋಗಿಗಳ ಸಂಬಂಧಿಕರು ಒದ್ದಾಡುತ್ತಿದ್ದನ್ನ ಕಂಡ ಚಿಕ್ಕಬಳ್ಳಾಪುರ ನಗರದ ಮಾನಸ ಆಸ್ಪತ್ರೆ ವೈದ್ಯ ಡಾ.ಮಧುಕರ್, ಉಚಿತವಾಗಿ ರಕ್ತ ಸಂಗ್ರಹಿಸಿ ನೀಡಲು ಮುಂದಾಗಿದ್ದಾರೆ. ತಮ್ಮ ಸಿಬ್ಬಂದಿಯಿಂದಲೇ ರಕ್ತ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಮತ್ತು ಸ್ನೇಹಿತರಿಂದ ರೆಡ್ ಕ್ರಾಸ್ ಸಂಸ್ಥೆಗೆ ಸುಮಾರು 56 ಯುನಿಟ್ ರಕ್ತ ನೀಡಿ ಮಾದರಿಯಾಗಿದ್ದಾರೆ.
ಹಿಂದೆಲ್ಲಾ ರಕ್ತದಾನ ಶಿಬಿರಗಳನ್ನು ಹೆಚ್ಚಾಗಿ ಶಾಲಾ ಕಾಲೇಜುಗಳಲ್ಲಿ ಆಯೋಜಿಸುತ್ತಿದ್ದು, ಈಗ ಶಾಲಾ ಕಾಲೇಜು ಇಲ್ಲದಿರುವ ಕಾರಣ ರಕ್ತದ ಅಭಾವ ಎದುರಾಗಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಡಾ.ಮಧುಕರ್ ರಕ್ತ ಸಂಗ್ರಹಿಸಿ ಉಚಿತವಾಗಿ ವಿತರಿಸೋ ಕಾರ್ಯ ನಿಜಕ್ಕೂ ಗ್ರೇಟ್.
ವರದಿ: ರೋಷನ್, ಚಿಕ್ಕಬಳ್ಳಾಪುರ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post