ಬೆಂಗಳೂರು: ರಾಜ್ಯ ಸರ್ಕಾರ ಶಾಲೆಗಳನ್ನು ಆರಂಭಿಸುವ ಘೋಷಣೆ ಮಾಡಿರುವ ಬೆನ್ನಲ್ಲೇ ರುಪ್ಸಾ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದೆ. ತನ್ನ ವಿವಿಧ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿಲ್ಲ ಅಂತಾ ಆರೋಪಿಸಿ ಇಂದಿನಿಂದ ಆನ್ಲೈನ್ ಕ್ಲಾಸ್ಗಳನ್ನು ನಿಲ್ಲಿಸೋಕೆ ತೀರ್ಮಾನಿಸಿದೆ.
ರಾಜ್ಯ ಸರ್ಕಾರ ಜನವರಿ ಒಂದರಿಂದ 10 ಮತ್ತು 12ನೇ ತರಗತಿಗಳನ್ನು ಆರಂಭಿಸೋದಾಗಿ ಘೋಷಿಸಿತ್ತು. ಅದರ ಬೆನ್ನಲ್ಲೇ ತಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಅಂತಾ ರುಪ್ಸಾ ಆರೋಪಿಸಿದೆ. ಹೀಗಾಗಿ ಇಂದಿನಿಂದ ಶೈಕ್ಷಣಿಕ ಚಟುವಟಿಕೆಗಳನ್ನು ನಿಲ್ಲಿಸಲು ತೀರ್ಮಾನಿಸಿದೆ.
ರುಪ್ಸಾ ಅಡಿಯಲ್ಲಿ 12 ಸಾವಿರ ಶಾಲೆಗಳು ನೋಂದಣಿ
ರುಪ್ಸಾ ಅಡಿಯಲ್ಲಿ 12 ಸಾವಿರ ಶಾಲೆಗಳು ನೋಂದಣಿಯಾಗಿವೆ. ಇಂದಿನಿಂದ 2 ಹಂತಗಳಲ್ಲಿ ರುಪ್ಸಾ ಶಾಲೆಗಳು ಪ್ರತಿಭಟನೆ ನಡೆಸಲಿವೆ. ಹೀಗಾಗಿ ಇಂದಿನಿಂದ ಯಾವುದೇ ತರಗತಿಗಳನ್ನು ನಡೆಸದಂತೆ ನಿರ್ಧರಿಸಲಾಗಿದೆ. ಎಲ್ಲ ಶಾಲೆಗಳ ಆನ್ಲೈನ್, ಆಫ್ಲೈನ್ ಕ್ಲಾಸ್ ಬಂದ್ ಆಗಲಿದೆ. ಜೊತೆಗೆ ಜನವರಿ 6ರಿಂದ 2ನೇ ಹಂತದ ಪ್ರತಿಭಟನೆ ನಡೆಸಲು ರುಪ್ಸಾ ನಿರ್ಧರಿಸಿದೆ.
ಬೇಡಿಕೆಗಳೇನು?
- 10-11-2020ರ ಸುತ್ತೋಲೆ ಮರುಪರಿಶೀಲನೆಗೆ ಒತ್ತಾಯ
- ಪೆಂಡಿಂಗ್ ಇರುವ ಅರ್ಜಿಗಳ ಶೀಘ್ರ ವಿಲೇವಾರಿ ಮಾಡಬೇಕು
- 124 ಶಾಲೆಗಳನ್ನ ಮುಚ್ಚುವ ನಿರ್ಧಾರ ಹಿಂಪಡೆಯಬೇಕು
- ಬಾಕಿಯಿರುವ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಬೇಕು
- ಖಾಸಗಿ ಶಾಲಾ ಶಿಕ್ಷಕರಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ
- ಶಾಲಾ ವಾಹನಗಳ ಸಾಲಗಳ ಮರುಪಾತಿ ಮುಂದೂಡಬೇಕು
ಹೀಗೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ರುಪ್ಸಾ ಹೋರಾಟಕ್ಕೆ ಮುಂದಾಗಿದ್ರೆ ಕ್ಯಾಮ್ಸ್ ಮಾತ್ರ ರುಪ್ಸಾ ಹೋರಾಟಕ್ಕೆ ನಮ್ಮ ಬೆಂಬಲ ಇಲ್ಲ. ಯಾವುದೇ ಕಾರಣಕ್ಕೂ ಆನ್ಲೈನ್ ಕ್ಲಾಸ್ ಸ್ಥಗಿತ ಮಾಡೊಲ್ಲ ಅಂತಾ ಸ್ಪಷ್ಟನೆ ನೀಡಿದೆ ಇದೇ ವಿಚಾರ ಈಗ ಕ್ಯಾಮ್ಸ್ ಮತ್ತು ರೂಪ್ಸಾ ನಡುವೆ ಟಾಕ್ವಾರ್ಗೂ ಕಾರಣವಾಗಿದೆ. ಸರ್ಕಾರದ ಜೊತೆಗೆ ಸೇರಿಕೊಂಡು ಕ್ಯಾಮ್ಸ್ ಬರೆ ಎಳೀತಾ ಇದೆ ಅಂತಾ ಆರೋಪಿಸಿರುವ ರುಪ್ಸಾ, ಶಿಕ್ಷಣ ಸಚಿವರ ರಾಜೀನಾಮೆಗೂ ಆಗ್ರಹಿಸಿದೆ. ಒಟ್ಟಿನಲ್ಲಿ ಶಾಲಾರಂಭದ ಘೋಷಣೆ ಬೆನ್ನಲ್ಲೇ ಮತ್ತೆ ಮುನ್ನೆಲೆಗೆ ಬಂದಿರುವ ಈ ಸಮಸ್ಯೆಗಳನ್ನು ಸರ್ಕಾರ ಹೇಗೆ ನಿಭಾಯಿಸುತ್ತೆ ಅನ್ನೋದನ್ನು ಕಾದುನೋಡಬೇಕು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post