ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ಕನಸಿನ ಪ್ರಾಜೆಕ್ಟ್ ಗುಜರಾತ್ನಲ್ಲಿ ತಲೆ ಎತ್ತಲಿದೆ. ದೇಶದಲ್ಲಿ ರಿಲಯನ್ಸ್ ಕಂಪನಿ ಜಗತ್ತಿನ ಅತೀ ದೊಡ್ಡ ಮೃಗಾಲಯವನ್ನು ನಿರ್ಮಿಸಲು ಮುಂದಾಗಿದೆ. ಗುಜರಾತ್ನ ಜಾಮ್ನಗರದಲ್ಲಿ ಈ ಮೃಗಾಲಯ ನಿರ್ಮಾಣವಾಗಲಿದೆ.
ದೇಶ ಹಾಗೂ ವಿದೇಶದಲ್ಲಿ ಕಾಣಸಿಗುವ ಸುಮಾರು100 ವಿವಿಧ ಜಾತಿಯ ಪ್ರಾಣಿ-ಪಕ್ಷಿಗಳ ವಾಸಕ್ಕೆ ಅನುಕೂಲವಾಗುವಂತೆ ಎಲ್ಲಾ ರೀತಿಯ ಸವಲತ್ತುಗಳೊಂದಿಗೆ ಈ ಮೃಗಾಲಯ ನಿರ್ಮಾಣವಾಗಲಿದೆ. ಸುಮಾರು 280 ಎಕರೆ ಪ್ರದೇಶದಲ್ಲಿ ಮೃಗಾಲಯ ನಿರ್ಮಿಸುವ ಯೋಜನೆಯಿದೆ ಎನ್ನಲಾಗಿದೆ.
ಕೊರೊನಾ ಕಾರಣದಿಂದಾಗಿ ಮೃಗಾಲಯ ನಿರ್ಮಾಣದ ಕೆಲಸ ತಡವಾಗುತ್ತಿದ್ದು, ಇನ್ನೆರಡು ವರ್ಷಗಳಲ್ಲಿ ಮೃಗಾಲಯ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ ಅಂತ ವರದಿಯಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post