ಕೋಲ್ಕತ್ತ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿನ್ನೆ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಅವರನ್ನ ಭೇಟಿಯಾಗಿದ್ದಾರೆ. ಗಂಗೂಲಿ ಅವರು ದಿಢೀರ್ ರಾಜ್ಯಪಾಲರನ್ನ ಭೇಟಿಯಾಗಿರೋದು ಹಲವು ಚರ್ಚೆಗಳಿಗೆ ಕಾರಣವಾಗಿದೆ.
ವೈಯಕ್ತಿಕ ಕಾರಣಗಳಿಂದ ಗಂಗೂಲಿ ಅವರು ರಾಜ್ಯಪಾಲರನ್ನ ರಾಜಭವನದಲ್ಲಿ ಭೇಟಿಯಾಗಿದ್ದಾರೆ ಅಂತಾ ವಿವರಿಸಲಾಗಿದೆ. ಈ ಸಂದರ್ಭದಲ್ಲಿ ಹಲವು ವಿಚಾರಗಳನ್ನ ಇಬ್ಬರು ಗಣ್ಯರು ಚರ್ಚೆ ಮಾಡಿದ್ದಾರೆ. ಜೊತೆಗೆ ರಾಜ್ಯಪಾಲರು.. 1864 ರಲ್ಲಿ ಸ್ಥಾಪಿಸಲಾದ ದೇಶದ ಅತ್ಯಂತ ಹಳೆಯ ಕ್ರಿಕೆಟ್ ಮೈದಾನ ಈಡನ್ ಗಾರ್ಡನ್‌ಗೆ ಭೇಟಿ ನೀಡುವ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾರೆ. ಇನ್ನು ಈ ವೇಳೆ ಹಲವು ವಿಚಾರಗಳನ್ನ ಚರ್ಚೆ ಮಾಡಲಾಗಿದೆ ಅಂತಾ ರಾಜ್ಯಪಾಲರೇ ಸ್ವತಃ ಟ್ವೀಟ್ನಲ್ಲಿ ತಿಳಿಸಿದ್ದಾರೆ
ಕಳೆದ ಕೆಲವು ದಿನಗಳಿಂದ ಗಂಗೂಲಿ ಬಿಜೆಪಿಗೆ ಸೇರುವ ಬಗ್ಗೆ ಒಂದಿಷ್ಟು ವದಂತಿಗಳು ಹರಿದಾಡುತ್ತಿವೆ. ಇದೀಗ ರಾಜ್ಯಪಾಲರ ಭೇಟಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದಾಗಿನಿಂದಲೂ ಅವರು ಬಿಜೆಪಿ ಸೇರುತ್ತಾರೆ ಅಂತಾ ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಜನವರಿ 12 ರಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಮತ್ತಷ್ಟು ಟಿಎಂಸಿ ನಾಯಕರು ಸೇರಿದಂತೆ ಬಂಗಾಳದ ಹಲವು ಗಣ್ಯರು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಆಗ ಗಂಗೂಲಿ ಕೂಡ ಬಿಜೆಪಿ ಸೇರುತ್ತಾರೆ ಅನ್ನೋ ಚರ್ಚೆ ಶುರುವಾಗಿದೆ.
ವಿಶೇಷವೆಂದರೆ, ಈ ಹಿಂದೆ ಅಮಿತ್ ಶಾ ಕೋಲ್ಕತ್ತಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಂಗಾಳ್ ಕಾ ಭೂಮಿ ಪುತ್ರ್ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಅಂತಾ ಹೇಳಿದ್ದರು. ಬಂಗಾಳ್ ಕಾ ಭೂಮಿ ಪುತ್ರ್ ಅಂದ್ರೆ ಗಂಗೂಲಿ ಅವರೇ ಅಂತಾ ಹೇಳಲಾಗುತ್ತಿದೆ.
Had interaction with ‘Dada’ @SGanguly99 President @BCCI at Raj Bhawan today at 4.30 PM on varied issues.
Accepted his offer for a visit to Eden Gardens, oldest cricket ground in the country established in 1864. pic.twitter.com/tB3Rtb4ZD6
— Governor West Bengal Jagdeep Dhankhar (@jdhankhar1) December 27, 2020
— Governor West Bengal Jagdeep Dhankhar (@jdhankhar1) December 27, 2020
— Governor West Bengal Jagdeep Dhankhar (@jdhankhar1) December 27, 2020
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post