Age is a just a number ಎನ್ನುವುದನ್ನು ನಮ್ಮ ಎದುರಿಗಿನ ಆ್ಯಕ್ಟಿವ್ ಆಗಿರುವ ಹಿರಿಯರು ಪದೇ ಪದೇ ಸಾಬೀತುಪಡಿಸುತ್ತಿದ್ದಾರೆ. ಯುವ ಜನತೆ ಜಡ್ಡು ಹಿಡಿದು ಕುಳಿತುಕೊಳ್ಳದಂತೆ ಅವರನ್ನು ಹುರಿದುಂಬಿಸಲು 92 ವರ್ಷದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಸತತವಾಗಿ 90 ಓಟದ ಇವೆಂಟ್ಗಳಲ್ಲಿ ಭಾಗಿಯಾಗಿ ಮಾದರಿಯಾಗಿದ್ದಾರೆ.
92 ವರ್ಷದ ಎನ್.ಎಸ್ ದತ್ತಾತ್ರೇಯ ಅವರು ಟಿಸಿಎಸ್ ವರ್ಲ್ಡ್ 10ಕೆ ಮ್ಯಾರಥಾನ್ ಬೆಂಗಳೂರು 2020 ಅನ್ನು ಪೂರ್ಣಗೊಳಿಸಿದ್ದಾರೆ. ಟಿಸಿಎಸ್ ವರ್ಲ್ಡ್ 10ಕೆ ಎನ್ನುವುದು ಬೆಂಗಳೂರಿನಲ್ಲಿ ನಡೆಯುವ ವಾರ್ಷಿಕ 10 ಕಿಲೋಮೀಟರ್ ಓಟದ ಸ್ಪರ್ಧೆಯಾಗಿದೆ.
2019ರ ಜನವರಿಯಲ್ಲಿ ಮ್ಯಾರಥಾನ್‌ಗಳು ಮತ್ತು ವಾಕ್‌ಥಾನ್‌ಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡ ದತ್ತಾತ್ರೇಯ ಅವರು, ಈವರೆಗೆ 90ಕ್ಕೂ ಹೆಚ್ಚು ಓಟದ ಇವೆಂಟ್ಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲದೇ ವಿವಿಧ ವಿಭಾಗಗಳಲ್ಲಿ ಐದು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಓಟದಲ್ಲಿನ ದತ್ತಾತ್ರೇಯ ಅವರ ಉತ್ಸಾಹವು ಭಾರತದಾದ್ಯಂತ ನೂರಾರು ಯುವಕರಿಗೆ ಸ್ಫೂರ್ತಿ ನೀಡಿದೆ. ಅವರಲ್ಲಿ ಒಬ್ಬರು ಗುಜರಾತ್‌ನ ವಡೋದರಾದರ ಮೂಲದ ಕುಲದೀಪ್ ಸಿಂಗ್ ಜಾಧವ್.
ಕುಲದೀಪ್ ಸಿಂಗ್ ಜಾಧವ್ ದತ್ತಾತ್ರೇಯ ಅವರ ಬಗ್ಗೆ ಹೇಳೋದು ಹೀಗೆ..
ನಿಜ ಹೇಳಬೇಕಂದ್ರೆ, ದತ್ತಾತ್ರೇಯ ಅವರು ನನ್ನ ಜೀವನ ಬದಲಿಸಿದ್ದಾರೆ. 2019ರಲ್ಲಿ ಮೊದಲ ಬಾರಿಗೆ ನಾನು ಅವರನ್ನು ಭೇಟಿಯಾದೆ. 91ರ ವಯಸ್ಸಿಲ್ಲಿ ಹೇಗೆ ಮ್ಯಾರಥಾನ್ ಓಡುತ್ತಾರೆ ಎಂದುಕೊಂಡೆ. ನಾನು ಕೇವಲ 5 ಕಿ.ಮೀ ಓಟದಲ್ಲಿ ಭಾಗವಹಿಸಿದೆ. ಆದರೆ ಅವರು 10 ಕಿ.ಮೀ ದೂರ ಓಡಿದ್ದಾರೆ. 91 ವರ್ಷ ವಯಸ್ಸಿನವರು ಇಷ್ಟು ದೂರು ಓಡಬಲ್ಲರು, ನನಗೆ ಯಾಕೆ ಸಾಧ್ಯವಿಲ್ಲ? ಎಂದು ಅಂದಿನಿಂದ ನಾನು ನನ್ನ ಸುತ್ತ ನಡೆಯುತ್ತಿರುವ ಪ್ರತಿ ಓಟ ಅಥವಾ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೇನೆ .
-ಕುಲದೀಪ್ ಸಿಂಗ್ ಜಾಧವ್
ಇನ್ನು ತಮ್ಮ ಓಟದ ಆಸಕ್ತಿಯ ಬಗ್ಗೆ ಮಾತನಾಡಿರುವ ದತ್ತಾತ್ರೇಯ ಅವರು ನಾನು ಯುವಜನರಿಗೆ ಆದರ್ಶಪ್ರಾಯನಾಗಲು ಬಯಸುತ್ತೇನೆ. ಯಾವಾಗಲೂ ವರ್ಚುವಲ್ ಜಗತ್ತಿನಲ್ಲಿ ತೊಡಗಿಸಿಕೊಂಡಿರುವ ಯುವಜನರನ್ನು ಪ್ರೇರೇಪಿಸಲು ಬಯಸುತ್ತೇನೆ. ನನ್ನ ಪ್ರಕಾರ ಆರೋಗ್ಯವೇ ಭಾಗ್ಯ, ನನ್ನ ಫಿಟ್ನೆಸ್ ಕಾಪಾಡಿಕೊಳ್ಳಲು ಓಡುತ್ತೇನೆ. ಯುವಕರು ಕೂಡ ಇದೇ ರೀತಿ ಅಭ್ಯಾಸ ರೂಡಿಸಿಕೊಳ್ಳಬೇಕು. ವರ್ಚುವಲ್ ಪ್ರಪಂಚದ ಹೊರಗೆ ಒಂದು ಜೀವನವಿದೆ ಎಂದು ಅವರಿಗೆ ಗೊತ್ತಾಗಬೇಕು. ಯುವಕರು ದಿನಕ್ಕೆ 5 ಕಿ.ಮೀ ನಡಿಗೆ ಅಥವಾ ಓಟವನ್ನು ಅವರ ದೈನಂದಿನ ಜೀವನದ ಪ್ರಮುಖ ಭಾಗವಾಗಿಸಿಕೊಳ್ಳಬೇಕು..
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post