ನವದೆಹಲಿ: ದೇಶದಲ್ಲಿ ಅನೇಕ ಕಂಪನಿಗಳು ಕೊರೊನಾ ಲಸಿಕೆಗಳನ್ನು ತಯಾರಿಸುವಲ್ಲಿ ನಿರತವಾಗಿವೆ. ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋನೆ ನೀಡಿದೆ. ಈ ಮಧ್ಯೆ ನಿನ್ನೆ ಮಾತನಾಡಿರುವ ಪ್ರಧಾನಿ ಮೋದಿ, ದೇಶದಲ್ಲಿ ಹೊಸದಾಗಿ ಮತ್ತೆ ನಾಲ್ಕು ವ್ಯಾಕ್ಸಿನ್ಗಳು ಅಭಿವೃದ್ಧಿಗೊಳ್ಳುತ್ತಿವೆ ಅಂತಾ ಖುಷಿ ವಿಚಾರವನ್ನ ಹಂಚಿಕೊಂಡಿದ್ದರು.
ಮೋದಿ ಅವರ ಈ ಹೇಳಿಕೆ ಬೆನ್ನಲ್ಲೇ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಹೊಸ ಭರವಸೆಯನ್ನ ನೀಡಿದೆ. ನಿನ್ನೆ ಎರಡನೇ ಹಂತದ ಕ್ಲೀನಿಕಲ್ ಪ್ರಯೋಗವನ್ನ ಮುಗಿಸಿರುವ ತಜ್ಞರು, ಲಸಿಕೆಯ ಸುರಕ್ಷತೆಗೆ ಸಂಬಂಧಿಸಿದ ಒಂದಿಷ್ಟು ಮಾನದಂಡಗಳ ಬಗ್ಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ವರದಿ ನೀಡಿದ್ದಾರೆ.
ಲ್ಯಾಬೊರೇಟರೀಸ್ ಲಿಮಿಟೆಡ್ನ ಡಾ.ರೆಡ್ಡಿ ನೀಡಿರುವ ಮಾಹಿತಿ ಪ್ರಕಾರ.. ಸ್ಪುಟ್ನಿಕ್ ವಿ ಲಸಿಕೆಯ 2ನೇ ಹಂತದ ಕ್ಲಿನಿಕಲ್ ಪರೀಕ್ಷೆಯ ಸುರಕ್ಷತಾ ಡೇಟಾವನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಗೆ ಕಳುಹಿಸಲಾಗಿದೆ. ಇದೇ ವೇಳೆ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಅನುಮತಿ ಕೇಳಲಾಗಿದೆ ಅಂತಾ ತಿಳಿಸಿದ್ದಾರೆ. ಲ್ಯಾಬೊರೇಟರೀಸ್ ಲಿಮಿಟೆಡ್ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯನ್ನ ಭಾರತದಲ್ಲಿ ತಯಾರಿಸುತ್ತಿದೆ.
ರಷ್ಯಾದಲ್ಲಿ ತಯಾರಿಸಿದ ಸ್ಪುಟ್ನಿಕ್-ವಿ ಲಸಿಕೆ ಶೇಕಡಾ 95 ರಷ್ಟು ಪರಿಣಾಮಕಾರಿ ಎಂದು ಹೇಳಿಕೊಂಡಿದೆ. ಫಲಿತಾಂಶಗಳ ಆಧಾರದ ಮೇಲೆ, ಇದು ಫೈಜರ್ ಮತ್ತು ಮೊಡೆರ್ನಾ ಲಸಿಕೆಗೆ ಸಮನಾಗಿ ಕಂಡುಬರುತ್ತದೆ. ಮಾಡರ್ನಾದ ಲಸಿಕೆ 94.5% ಪರಿಣಾಮಕಾರಿ ಎಂದು ಕಂಡುಬಂದಿದೆ, ಫೈಜರ್‌ನ ಲಸಿಕೆ ಶೇಕಡಾ 95 ಪರಿಣಾಮಕಾರಿ ಎಂದು ಸಂಸ್ಥೆ ಹೇಳಿಕೊಂಡಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post