ಬೆಂಗಳೂರು: ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರೋ ಕೋವಿಶೀಲ್ಡ್ ಲಸಿಕೆಯ ಡೋಸ್ಗಳು ಬೆಂಗಳೂರಿಗೆ ಬಂದಿಳಿದಿದೆ.
ಜನವರಿ 16ರಿಂದ ದೇಶದಾದ್ಯಂತ ಲಸಿಕೆ ವಿತರಣೆ ಆರಂಭವಾಗಲಿರೋ ಹಿನ್ನೆಲೆ ಸೀರಮ್ ಸಂಸ್ಥೆ ರಾಜ್ಯಗಳಿಗೆ ಲಸಿಕೆ ಪೂರೈಸುವ ಕಾರ್ಯ ಆರಂಭಿಸಿದೆ. ಇಂದು ಬೆಳಗ್ಗೆ ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಘಟಕದಿಂದ 3 ಟ್ರಕ್ಗಳಲ್ಲಿ ಲಸಿಕೆಯನ್ನ ಪುಣೆ ವಿಮಾನ ನಿಲ್ದಾಣಕ್ಕೆ ಕಳಿಸಲಾಯ್ತು. ಬಳಿಕ ಅಲ್ಲಿಂದ 9 ವಿಮಾನದಲ್ಲಿ ರಾಜ್ಯದ 13 ನಗರಗಳಿಗೆ ಲಸಿಕೆಯನ್ನ ಸಾಗಣೆ ಮಾಡಲಾಗಿದೆ.
ಮಧ್ಯಾಹ್ನ 12.30ರ ವೇಳೆಗೆ ಲಸಿಕೆ ಬೆಂಗಳೂರು ವಿಮಾನ ನಿಲ್ದಾಣವನ್ನ ತಲುಪಿದೆ. ಇಲ್ಲಿಂದ ರಾಜ್ಯದ ವಿವಿಧ ಲಸಿಕಾ ಕೇಂದ್ರಗಳಿಗೆ ಇಂದು ಅಥವಾ ನಾಳೆ ಕೋವಿಶೀಲ್ಡ್ ಲಸಿಕೆಯನ್ನ ರವಾನೆ ಮಾಡಲಾಗುತ್ತದೆ.
ಇಂದು 13 ಸ್ಥಳಗಳಿಗೆ ತಲುಪಲಿದೆ ಕೋವಿಶೀಲ್ಡ್
ಇಂದು ದೇಶದ 13 ನಗರಗಳಿಗೆ ಸೀರಮ್ ಇನ್ಸ್ಟಿಟ್ಯೂಟ್ನ ಲಸಿಕೆ ಬಂದು ತಲುಪಲಿದೆ. ಬಳಿಕ ಈ ಕೇಂದ್ರಗಳಿಂದ ಆಯಾ ರಾಜ್ಯದ ವಿವಿಧ ಪ್ರದೇಶಗಳಿಗೆ ಲಸಿಕೆಯನ್ನ ಕಳಿಸಲಾಗುತ್ತದೆ.
- ಬೆಂಗಳೂರು
- ದೆಹಲಿ
- ಚೆನ್ನೈ
- ಕೊಲ್ಕತ್ತಾ
- ಗುವಾಹಟಿ
- ಶಿಲ್ಲಾಂಗ್
- ಅಹಮದಾಬಾದ್
- ಹೈದರಾಬಾದ್
- ವಿಜಯವಾಡ
- ಭುವನೇಶ್ವರ
- ಪಾಟ್ನಾ
- ಲಖನೌ
- ಚಂಡೀಘಡ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post