ನವದೆಹಲಿ: ಇತ್ತೀಚೆಗೆ ವಾಟ್ಸ್ಆ್ಯಪ್ ಬಳಕೆದಾರರಿಗೆ ಎದುರಾಗಿದ್ದ ತಮ್ಮ ವೈಯುಕ್ತಿಕ ಸಂದೇಶಗಳ ಸೋರಿಕೆ ಕುರಿತ ಗೊಂದಲಗಳಿಗೆ ತೆರೆ ಎಳೆಯಲು ಮುಂದಾಗಿರುವ ಫೇಸ್ಬುಕ್ ಮಾಲೀಕತ್ವದ ವಾಟ್ಸ್ಆ್ಯಪ್ ಮತ್ತೊಮ್ಮೆ ಸ್ಪಷ್ಟನೆ ನೀಡಿದೆ.
ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ನಡೆಸಿದ ಸಂದೇಶಗಳ ಮೇಲೆ ಪರಿಷ್ಕೃತ ಪ್ರೈವೇಟ್ ಪಾಲಿಸಿ ಯಾವುದೇ ಪರಿಣಾಮ ಬೀರಲ್ಲ. ಈ ಅಪ್ಡೇಟ್ ಬಿಸಿನೆಸ್ಗೆ ಸಂಬಂಧಿಸಿದ ಸಂದೇಶಗಳನ್ನು ಕಳುಹಿಸುವ ಬಗ್ಗೆ ಮಾತ್ರ ಒಳಗೊಂಡಿದೆ ಎಂದು ತಿಳಿಸಿದೆ.
ವಾಟ್ಸ್ಆ್ಯಪ್ ನೀಡಿರೋ ಸ್ಪಷ್ಟನೆಯ ಮುಖ್ಯಾಂಶಗಳು.
- ವಾಟ್ಸ್ಆ್ಯಪ್ ವೈಯುಕ್ತಿಕ ಸಂದೇಶಗಳನ್ನು ನೋಡಲು ಅಥವಾ ಕರೆಗಳನ್ನು ಕೇಳಲು ಸಾಧ್ಯವಿಲ್ಲ. ಫೇಸ್‌ಬುಕ್‌ಗೂ ಇದು ಸಾಧ್ಯವಿಲ್ಲ.
- ಪ್ರತಿಯೊಬ್ಬರೂ ಸಂದೇಶ ಕಳುಹಿಸುವ ಅಥವಾ ಕರೆ ಮಾಡುವವರ ದಾಖಲೆಗಳನ್ನು ಮಾತ್ರ ವಾಟ್ಸಾಪ್ ಇರಿಸಿಕೊಳ್ಳುತ್ತದೆ.
- ಲೋಕೇಶನ್ ಶೇರ್ ಮಾಡಿರುವುದನ್ನು ವಾಟ್ಸಾಪ್ ಅಥವಾ ಫೇಸ್ಬುಕ್ ನೋಡಲು ಸಾಧ್ಯವಿಲ್ಲ.
- ನೀವು ಸೇವ್ ಮಾಡಿಕೊಂಡಿರುವ contactsಗಳನ್ನು ವಾಟ್ಸಾಪ್, ಫೇಸ್ಬುಕ್ನೊಂದಿಗೆ ಹಂಚಿಕೆ ಮಾಡಿಕೊಳ್ಳುವುದಿಲ್ಲ.
- ವಾಟ್ಸಾಪ್ ಗ್ರೂಪ್ಗಳು ಖಾಸಗಿಯಾಗಿಯೇ ಉಳಿದುಕೊಳ್ಳಲಿದೆ.
- ನಿಮ್ಮ ಸಂದೇಶಗಳನ್ನು ಅಳಿಸಿ ಹಾಕುವಂತೆ ನೀವು ಸೆಟ್ ಮಾಡಿಕೊಳ್ಳಬಹುದು.
- ನಿಮ್ಮ ಡೇಟಾವನ್ನು ನೀವು ಡೌನ್‌ಲೋಡ್ ಮಾಡಬಹುದಾಗಿದೆ.
ಫೇಸ್ಬುಕ್ನೊಂದಿಗೆ ವಾಟ್ಸಾಪ್ ತನ್ನ ಮಾಹಿತಿಯನ್ನು ಹಂಚಿಕೊಳ್ಳದೆ ಎಂಬ ಸುದ್ದಿಯ ಬಳಿಕ ಎರಡನೇ ಬಾರಿಗೆ ವಾಟ್ಸಾಪ್ ಸ್ಪಷ್ಟನೆಯನ್ನು ನೀಡಿದೆ. ಹೊಸ ನಿಯಮಗಳಿಗೆ ಬಳಕೆದಾರರು ಒಪ್ಪಿಗೆ ನೀಡುವುದು ಕಡ್ಡಾಯವಾಗಿದ್ದು, ಫೆಬ್ರವರಿಯಿಂದ ಹೊಸ ನೀಡಿ ಜಾರಿ ಆಗಲಿದೆ. ಹೊಸ ನಿಯಮಗಳಿಗೆ ಒಪ್ಪಿಗೆ ನೀಡದಿದ್ದರೇ ವಾಟ್ಸಾಪ್ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಭಾರತದಲ್ಲಿ ಮಾತ್ರ ವಾಟ್ಸಾಪ್ 400 ಮಿಲಿಯನ್ ಬಳಕೆದಾರರನ್ನು ವಾಟ್ಸಾಪ್ ಹೊಂದಿದೆ.
We want to address some rumors and be 100% clear we continue to protect your private messages with end-to-end encryption. pic.twitter.com/6qDnzQ98MP
— WhatsApp (@WhatsApp) January 12, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post