ನಿರ್ದೇಶಕ ಆರ್. ಚಂದ್ರು ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದ್ದು ಉಪ್ಪಿಯ ಕಬ್ಜಕ್ಕೆ ಕಿಚ್ಚ ಸುದೀಪ್ ಎಂಟ್ರಿಯಾಗಿದ್ದಾರೆ.
‘ಕಬ್ಜ..’ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್.ಚಂದ್ರು ಮೂರನೇ ಬಾರಿಗೆ ಒಟ್ಟಿಗೆ ಕೆಲಸ ಮಾಡುತ್ತಿರುವ ಬಿಗ್ ಬಜೆಟ್ ಸಿನಿಮಾ. ಭಾರತೀಯ ಬಹುನಿರೀಕ್ಷಿತ ಸಿನಿಮಾ ಅಂದ್ರು ತಪ್ಪಾಗಲ್ಲ. ಏಳು ಭಾಷೆಗಳಲ್ಲಿ ‘ಕಬ್ಜ’ ಸಿನಿಮಾವನ್ನ ತೆರೆಯ ಮೇಲೆ ತರಲು ಸಜ್ಜಾಗಿರೋ ಉಪ್ಪಿ-ಚಂದ್ರು ಸಿನಿ ಕಾಂಬೋ, ಇದೀಗ ಚಿತ್ರದ ಹೊಸ ಎಂಟ್ರಿಯ ಬಗ್ಗೆ ನಾಳೆ ಅನೌನ್ಸ್ ಮಾಡಲು ಹೊರಟಿದೆ. ಹೌದು.. ಜನವರಿ 14, ಮಕರ ಸಂಕ್ರಾಂತಿಯ ದಿನದಂದೇ, ‘ಕಬ್ಜ’ ಸಿನಿಮಾದ ಮತ್ತೊಂದು ಪವರ್ಫುಲ್ ಪಾತ್ರದ ಬಗ್ಗೆ ಬಿಚ್ಚಿಡಲಿದೆ ಚಿತ್ರತಂಡ. ಆದ್ರೆ, ಸದ್ಯ ನ್ಯೂಸ್ ಫಸ್ಟ್ಗೆ ಬಲ್ಲ ಮೂಲಗಳಿಂದ ಸಿಕ್ಕಿರುವ ಮಾಹಿತಿಯೇ, ಸ್ಯಾಂಡಲ್ವುಡ್ ಆರಡಿ ಕಟೌಟ್ ಕಿಚ್ಚ ಸುದೀಪ್ ಆ ಪವರ್ಫುಲ್ ಪಾತ್ರ ಅನ್ನೋದು.
ಯೆಸ್.. ಮತ್ತೊಮ್ಮೆ ನಟ ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಒಂದಾಗಲಿದ್ದಾರೆ ಅನ್ನೋ ಸುದ್ದಿ ಸದ್ಯ ಜೋರಾಗಿ ಸೌಂಡ್ ಮಾಡ್ತಿದೆ. ನಂದ ಕಿಶೋರ್ ನಿರ್ದೇಶನದ ‘ಮುಕುಂದ ಮುರಾರಿ’ ಸಿನಿಮಾದ ನಂತರ ಉಪ್ಪಿ ಹಾಗೂ ಕಿಚ್ಚ ಮತ್ತೊಮ್ಮೆ ಒಟ್ಟಾಗಿ ನಟಿಸಲಿದ್ದಾರೆ. ನಾಳೆ ‘ಕಬ್ಜ’ ಚಿತ್ರತಂಡ ಕಿಚ್ಚ ಸುದೀಪ್ ಅವರ ಫಸ್ಟ್ ಲುಕ್ ರಿವೀಲ್ ಮಾಡಲಿದೆ. ಅಂದ್ಹಾಗೇ, ವಿಶೇಷ ಅಂದ್ರೆ, ಇದು ಕಿಚ್ಚ ಸುದೀಪ್ಗೆ ಮೊದಲ ರೆಟ್ರೋ ಸಿನಿಮಾ. ಹೌದು.. ಈವರೆಗೂ ಕಿಚ್ಚ ಯಾವುದೇ ರೆಟ್ರೋ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ.
ಇನ್ನು, ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ‘ಕಬ್ಜ’ ಸಿನಿಮಾದ ಶೂಟಿಂಗ್ ನಡೆಯಲಿದೆ. ಅನಂತರ ಹಿಂದಿ, ಮಲಯಾಳಂ, ಮರಾಠಿ ಹಾಗೂ ಬೆಂಗಾಲಿ ಭಾಷೆಗಳಲ್ಲಿ ಡಬ್ ಮಾಡಲಾಗುವುದು ಅಂತ ಚಿತ್ರತಂಡ ಈ ಹಿಂದೆಯೇ ತಿಳಿಸಿದೆ. ನಿರ್ದೇಶಕ ಆರ್.ಚಂದ್ರು ಆ್ಯಕ್ಷನ್ ಕಟ್ ಹೇಳಲಿರುವ ಈ ಸಿನಿಮಾಗೆ ರವಿ ಬಸ್ರೂರು ಸಂಗೀತ ನೀಡಲಿದ್ದಾರೆ. ಆದ್ರೆ, ಚಿತ್ರಕ್ಕೆ ನಾಯಕಿ ಯಾರು ಅನ್ನೋದನ್ನ ಚಿತ್ರತಂಡ ಇನ್ನೂ ಬಿಚ್ಚಿಟ್ಟಿಲ್ಲ. ರಿಯಲ್ ಸ್ಟಾರ್ ಉಪೇಂದ್ರ ಜೊತೆ ಜಗಪತಿ ಬಾಬು, ಜಯ ಪ್ರಕಾಶ್, ಕಾಟ್ ರಾಜು, ಸುಬ್ಬರಾಜು, ಅವಿನಾಶ್, ಎಂ.ಕಾಮರಾಜ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post