ಮದುರೈ: ನಾಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮಿಳುನಾಡು ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಮಕರ ಸಂಕ್ರಾತಿಯ ಹಬ್ಬದಂದು ಚುನಾವಣೆಯ ಕಹಳೆ ಮೊಳಗಿಸಲು ಮುಂದಾಗಿರುವ ರಾಹುಲ್ ಗಾಂಧಿ, ಪೋಂಗಲ್ ಹಬ್ಬದ ಪ್ರಯುಕ್ತ ನಡೆಯುವ ‘ಜಲ್ಲಿಕಟ್ಟು’ ಕಾರ್ಯಕ್ರಮದಲ್ಲಿಯೂ ಭಾಗಿಯಾಗುತ್ತಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ಕಣ್ಣು ಕೆಂಪಾಗಿಸಿದೆ.
ನಾಳಿನ ರಾಹುಲ್ ಗಾಂಧಿ ಭೇಟಿ ರಾಜಕೀಯ ಕೆಸರೆರಚಾಟಕ್ಕೆ ಎಡೆಮಾಡಿಕೊಟ್ಟಿದ್ದು, ಬಿಜೆಪಿ ಅವರನ್ನ ಡಬಲ್ ಸ್ಟ್ಯಾಂಡರ್ಡ್ ಎಂದು ಆರೋಪಿಸಿದೆ. 2016 ರಲ್ಲಿ ಜಲ್ಲಿಕಟ್ಟು ವಿರೋಧಿಸಿರುವ ಕಾಂಗ್ರೆಸ್ ಇದೀಗ ಬೆಂಬಲ ನೀಡಿದೆ. 2016 ರ ಪ್ರಣಾಳಿಕೆಯಲ್ಲಿ ಜಲ್ಲಿಕಟ್ಟು ಬ್ಯಾನ್ ಮಾಡುವ ಬಗ್ಗೆ ಹೇಳಿತ್ತು.
ದೇಶಾದ್ಯಂತ ನೂತನ ಕೃಷಿ ಕಾನೂನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಿಗೆ ನೈತಿಕ ಬೆಂಬಲವಾಗಿ ನಾಳೆ ರಾಹುಲ್ ಗಾಂಧಿ ಅವರು ಬರುತ್ತಿದ್ದಾರೆ ಅಷ್ಟೇ. ಈ ವೇಳೆ ಮದುರೈನ ಅವನಿಯಪುರಂನಲ್ಲಿ ನಡೆಯುವ ಜಲ್ಲಿಕಟ್ಟು ಕೂಟದಲ್ಲೂ ಭಾಗಿಯಾಗಲಿದ್ದಾರೆ. ಎತ್ತುಗಳು ರೈತನ ಬೆನ್ನೆಲುಬು, ಅವುಗಳೊಂದಿಗೆ ಅನ್ನದಾತನ ಜೀವನ ನಿಂತಿದೆ ಅಂತಾ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆಎಸ್ ಅಳಗಿರಿ ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post