ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದಲ್ಲಿ ಮತ್ತೊಮ್ಮೆ ಪಾಕ್ ಉಗ್ರರು ದೇಶದೊಳಗೆ ನುಸುಳಲು ಬಳಸಿರುವ ಸುರಂಗವೊಂದು ಪತ್ತೆಯಾಗಿದೆ. ಹೊರಾನಗರ್ ಸೆಕ್ಟಾರ್ನ ಕಥುವಾ ಬಳಿ ಸುರಂಗ ಪತ್ತೆಯಾಗಿದ್ದು 150 ಮೀಟರ್ ಉದ್ದದ ಸುರಂಗ ಇದಾಗಿದೆ ಎನ್ನಲಾಗಿದೆ.
ಸುರಂಗ ನಿರ್ಮಾಣದಲ್ಲಿ ಉಗ್ರರು ವ್ಯವಸ್ಥಿತ ಇಂಜಿನಿಯರಿಂಗ್ ತಂತ್ರಗಳನ್ನ ಬಳಸಿದ್ದಾರೆ. ಪಾಕ್ ಹೀಗೆ ಸುರಂಗಗಳನ್ನ ಬಳಸುವ ಮೂಲಕ ಮತ್ತೆ ಮತ್ತೆ ಉಗ್ರರನ್ನು ದೇಶದೊಳಗೆ ನುಸುಳುವಂತೆ ಮಾಡುತ್ತಿದೆ ಎಂದು ಬಿಎಸ್ಎಫ್ ಆರೋಪಿಸಿದೆ. ಇನ್ನು ಬಿಎಸ್ಎಫ್ ತನ್ನ ಸಿಬ್ಬಂದಿಗೆ ಸುರಂಗಗಳ ಕುರಿತು ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಿದೆ ಎನ್ನಲಾಗಿದೆ. ಈ ಹಿಂದೆಯೂ ಬಿಎಸ್ಎಫ್ ಸಿಬ್ಬಂದಿ ಪಾಕ್ ಉಗ್ರರು ದೇಶದೊಳಗೆ ನುಸುಳಲು ಬಳಸಿದ್ದ ಸುರಂಗಗಳನ್ನ ಪತ್ತೆಹಚ್ಚಿದ್ದರು.
ಇದನ್ನೂ ಓದಿ: ಪಾಕ್ನಿಂದ ಭಾರತ ಪ್ರವೇಶಿಸೋ ಸುರಂಗ ಪತ್ತೆ.. ದೊಡ್ಡದಾಗಿ ನಡಿತಿದೆಯಾ ನುಸುಳುವಿಕೆ?
Alert BSF troops detected a tunnel in the Samba Sector of Jammu; thwarting the nefarious designs of Pakistan.@BSFIndia #BSF #FirstLineOfDefence #AlertTroops #AlertBorderGuardians pic.twitter.com/fvpi7L9KW9
— BSF JAMMU (@bsf_jammu) January 13, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post