ಬೆಂಗಳೂರು: ನಗರದ ಆನಂದ ರಾವ್ ಸರ್ಕಲ್‌ನ ಸ್ಟೇಟ್ಸ್ ವ್ಯಾಕ್ಸಿನ್ ಸ್ಟೋರೇಜ್ನಿಂದ ಬೆಂಗಳೂರು ನಗರ, ಚಿತ್ರದುರ್ಗ, ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಗಳ ಸ್ಟೋರೇಜ್ ಸೆಂಟರ್ಗಳಿಗೆ ಕೊರೊನಾ ವ್ಯಾಕ್ಸಿನ್ ರವಾನೆ ಮಾಡಲಾಗಿದೆ.
ಜಿಲ್ಲೆಗಳ ಜೊತೆಗೆ ತಾಲೂಕು ಘಟಕಗಳಿಗೂ ಒಟ್ಟು 4 ಟ್ರಕ್ಗಳ ಮೂಲಕ ವ್ಯಾಕ್ಸಿನ್ ರವಾನೆ ಮಾಡಲಾಗಿದೆ. ಬೆಂಗಳೂರಿನ ದಾಸಪ್ಪ ಆಸ್ಪತ್ರೆಗೆ ಒಂದು ಟ್ರಕ್ನಲ್ಲಿ 1 ಲಕ್ಷದ 5 ಸಾವಿರ ವ್ಯಾಕ್ಸಿನ್ ರವಾನೆ ಮಾಡಲಾಗಿದೆ. ಬೆಂಗಳೂರು ನಗರಕ್ಕೆ 175000 ಸಾವಿರ ಲಸಿಕೆ ಅಗತ್ಯವಿದೆ. ಮಾರ್ಷಲ್ಗಳ ಭದ್ರತೆಯಲ್ಲಿ ಸ್ಟೇಟ್ ವ್ಯಾಕ್ಸಿನ್ ಸೆಂಟರ್ನಿಂದ ದಾಸಪ್ಪ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ದಾಸಪ್ಪ ಆಸ್ಪತ್ರೆ ಬಳಿ ಕಮಿಷನರ್ ಮಂಜುನಾಥ್ ಪ್ರಸಾದ್ ವ್ಯಾಕ್ಸಿನ್ ರಿಸೀವ್ ಮಾಡಿಕೊಂಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post