ತಿರುವನಂತಪುರಂ: ದೆಹಲಿಯಲ್ಲಿ ಕೇಂದ್ರದ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ-2020, ರೈತರ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ-2020, ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ-2020 ಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 50 ನೇ ದಿನದತ್ತ ಸಾಗುತ್ತಿದೆ. ಇಂದು ಸಾಂಕೇತಿಕವಾಗಿ ಕೃಷಿ ಕಾನೂನುಗಳನ್ನ ಸುಟ್ಟುಹಾಕುವ ಮೂಲಕ ರೈತರು ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಈ ಮಧ್ಯೆ ಇದೀಗ ಕೇರಳದಿಂದ ಆಲ್ ಇಂಡಿಯಾ ಕಿಸಾನ್ ಸಭಾದ ಸದಸ್ಯರೂ ಸೇರಿದಂತೆ ಒಟ್ಟಿ 1,000 ರೈತರ ನಿಯೋಗ ದೆಹಲಿಯತ್ತ ಹೊರಟು ನಿಂತಿದೆ. ಈ ನಿಯೋಗದ ನೇತೃತ್ವವನ್ನ ಸಿಪಿಐ(ಎಮ್) ನ ಮಾಜಿ ರಾಜ್ಯ ಸಭಾ ಎಂಪಿ ಕೆ.ಎನ್. ಬಾಲಗೋಪಾಲ್ ವಹಿಸಿಕೊಳ್ತಿದ್ದಾರೆ ಎನ್ನಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಅವರು.. ಈ ಕೃಷಿ ಕಾನೂನುಗಳು ಪಂಜಾಬ್ ರೈತರ ಮೇಲಷ್ಟೇ ಪರಿಣಾಮ ಬೀರಲಿದೆ ಎನ್ನವುದು ಸರ್ಕಾರದ ಪ್ರೊಪಗಾಂಡ.. ಅಸಲಿಯತ್ತೇನೆಂದರೆ ಈ ಕಾನೂನುಗಳು ದೇಶದ ಪ್ರತಿಯೊಬ್ಬ ರೈತನ ಮೇಲೂ ಪರಿಣಾಮ ಬೀರಲಿವೆ. ಕನಿಷ್ಟ ಬೆಂಬಲ ಬೆಲೆಯನ್ನ ಕೇಂದ್ರ ಸರ್ಕಾರ ಮುಂದುವರೆಸುತ್ತದೆ ಎಂಬುದಕ್ಕೆ ಯಾವುದೇ ಲಿಖಿತ ಭರವಸೆಗಳಿಲ್ಲ. ಮಾರ್ಕೆಟ್ನ ನಿಯಂತ್ರಣ ಇರುವುದು ಪ್ರತಿಯೊಬ್ಬ ರೈತನಿಗೂ ಅನಿವಾರ್ಯ.
ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನ ಅವಲಂಬಿಸಿರುವ ಪ್ರತಿಯೊಬ್ಬ ವ್ಯಕ್ತಿಯ ಮೇಲೂ ಈ ಕಾನೂನುಗಳು ಪರಿಣಾಮ ಬೀರುತ್ತವೆ. ನಮ್ಮ ರಾಜ್ಯದಲ್ಲಿ ಬೆಳೆಯುವ 25 ಪ್ರತಿಶತ ಬೆಳೆಯನ್ನಷ್ಟೇ ನಾವು ಸೇವಿಸುತ್ತೇವೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನ ಬಹುತೇಕ ಜನರು ಅವಲಂಬಿಸಿದ್ದಾರೆ. ಓಪನ್ ಮಾರ್ಕೆಟ್ಗಳನ್ನು ಮಾಡುವುದರಿಂದ ಬೆಳೆಗಳಿಗೆ ಬೆಲೆ ಹೆಚ್ಚು ಸಿಗಬಹುದು. ಆದರೆ ಈ ಕಾರ್ಪೋರೇಟ್ ಕಂಪನಿಗಳು ನಮ್ಮಿಂದ ಕೊಂಡ ಬೆಳೆಯನ್ನು ಹೆಚ್ಚಿನ ಬೆಲೆಗೆ ಎಕ್ಸ್ಪೋರ್ಟ್ ಮಾಡಿದರೆ ನಮಗೂ ಸಹ ಆಹಾರದ ಕೊರತೆ ಎದುರಾಗಲಿದೆ ಎಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post