ಕೆಲವು ಪ್ರಾಣಿಗಳ ಮುದ್ದಾದ ವಿಡಿಯೋ ನಮ್ಮ ಮುಖದಲ್ಲಿ ನಗು ಮೂಡಿಸುತ್ತದೆ. ಕೆಲವು ವಿಡಿಯೋಗಳನ್ನು ನೋಡುತ್ತಿದ್ದರೆ ಮುನಸ್ಸಿಗೆ ಖುಷಿ ಎನಿಸುತ್ತದೆ. ಅದೇ ರೀತಿ ಹೆಣ್ಣು ಆನೆಯೊಂದು ನಾಚಿಕೊಂಡು ತನ್ನ ಮಾವುತನ ಬಳಿ ದೂರು ನೀಡುತ್ತಿರುವ ವಿಡಿಯೋ ನೋಡುಗರಿಗೆ ಖುಷಿ ನೀಡುವಂತಿದೆ.
ಮಾವುತ ಹಾಗೂ ಆನೆಗಳ ನಡುವೆ ಒಂದು ರೀತಿಯಾದ ಮಾತೃ-ಮಗು ರೀತಿ ಸಂಬಂಧವಿರುತ್ತದೆ. ಈ ವಿಡಿಯೋದಲ್ಲಿ ತಮಿಳುನಾಡಿನ ತಿರುಚಿರಾಪಳ್ಳಿಯ ಶ್ರೀರಂಗಂನ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಆನೆ ಹಾಗೂ ಅದರ ಮಾವುತನ ಮುದ್ದಾರ ಸಂವಾದವನ್ನು ನೋಡಬಹುದು. ದೇವಸ್ಥಾನದ ಎದುರಿಗೆ ಕೂತ ಮಾವುತ ಆನೆಯ ಸೋಂಡಿಲನ್ನು ತಬ್ಬಿಕೊಂಡು ಅವಳು ಹೇಳುತ್ತಿರುವ ದೂರಿನ ಬಗ್ಗೆ ಕೇಳುತ್ತಿರುತ್ತಾರೆ.
ಕ್ಯಾಮರ ನೋಡಿ ನಾಚಿದ ಆನೆ ತನ್ನ ಫೋಟೋ ತೆಗೆದುಕೊಳ್ಳುತ್ತಿರುವ ಬಗ್ಗೆ ತನ್ನ ಮುದ್ದಾದ ಭಾಷೆಯಿಂದ ಮಾವುತನಿಗೆ ದೂರು ನೀಡುತ್ತದೆ. ಆಕೆಯ ದೂರು ಕೇಳಿದ ಮಾವುತ ಅವಳ ಮನವೊಲಿಸಲು ಪ್ರಯತ್ನಿಸುತ್ತಾರೆ. ಮಾವುತನ ಪ್ರತಿ ಮಾತಿಗೂ ತಲೆಯಾಡಿಸಿ ಒಪ್ಪಿಕೊಂಡವಳಂತೆ ತಿಳಿಸುತ್ತದೆ. ಇವರಿಬ್ಬರ ನಡುವಿನ ಪರಸ್ಪರ ಸಂಭಾಷಣೆಯ ದೃಶ್ಯ ಎಂತವರಿಗಾದರೂ ಹೃದಯ ಮುಟ್ಟುವಂತಿದೆ.
Andal from Shrirangam temple being shy of camera as she talks to her mahout ❤🤗 pic.twitter.com/mHqJNoTCUq
— Gannuprem (@Gannuuprem) December 26, 2020
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post