ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಿರುವ ಟೀಮ್ ಇಂಡಿಯಾಗೆ, ಅಂತಿಮ ಟೆಸ್ಟ್ ಪಂದ್ಯ ದೊಡ್ಡ ಚಾಲೆಂಜಾಗಿದೆ ಪರಿಣಮಿಸಿದೆ. ಬಹುತೇಕ ಇಂಜುರಿಯಿಂದ ಬಳಲುತ್ತಿರುವ ಭಾರತಕ್ಕೆ, ಆಡುವ ಹನ್ನೋದರ ಆಯ್ಕೆ ಕಗಂಟ್ಟಾಗಿ ಪರಿಣಮಿಸಿದೆ.
ಆಟಗಾರರ ಗಾಯಾದ ಸಮಸ್ಯೆ, ಟೀಮ್ ಮ್ಯಾನೇಜ್ಮೆಂಟ್ಗೆ ತಲೆನೋವಾಗಿದೆ. ಆಸಿಸ್ ವಿರುದ್ಧದ ಮೊದಲ ಅಡಿಲೇಡ್ ಟೆಸ್ಟ್ನಲ್ಲಿ ವೇಗಿ ಮಹಮ್ಮದ್ ಶಮಿ, ಮೆಲ್ಬರ್ನ್ ಟೆಸ್ಟ್ನಲ್ಲಿ ಉಮೇಶ್ ಯಾದವ್. ಹೀಗೆ ದಿನದಿಂದ ದಿನಕ್ಕೆ ಟೀಮ್ ಇಂಡಿಯಾದಲ್ಲಿ ಗಾಯಾಳುಗಳ ಸಂಖ್ಯೆ ಏರುತ್ತಲೇ ಇದೆ. ಅದೇ ರೀತಿ ಸಿಡ್ನಿಯ ಮೂರನೇ ಪಂದ್ಯದಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ, ಹನುಮ ವಿಹಾರಿ, ಜಸ್ಪ್ರೀತ್ ಬೂಮ್ರಾ ಇಂಜುರಿಗೆ ತುತ್ತಾಗಿ, ಗಾಯಾಳು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಈ ಬೆನ್ನಲ್ಲೇ ನೆಟ್ಸ್ನಲ್ಲಿ ಅಭ್ಯಾಸ ನಡೆಸುತ್ತಿದ್ದ ಮಯಾಂಕ್ ಕೂಡ, ಗಾಯಾಳು ಆಗಿರುವುದು ಟೀಮ್ ಮ್ಯಾನೇಜ್ಮೆಂಟನ್ನ ಚಿಂತೆಗೆ ದೂಡಿದೆ. ಇದರಿಂದಾಗಿ ಬ್ರಿಸ್ಬೇನ್ನಲ್ಲಿ ನಡೆಯಲಿರುವ 4ನೇ ಟೆಸ್ಟ್ನ ಪ್ಲೇಯಿಂಗ್ ಇಲೆವನ್ನಲ್ಲಿ ಆಡೋದ್ಯಾರು ಎಂಬಂತಾಗಿದೆ.
ಟೀಮ್ ಇಂಜುರಿ ತಂಡದ ಆಯ್ಕೆ ಏನು..?
ಸಿಡ್ನಿಯ ಮೂರನೇ ಪಂದ್ಯ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಟೀಮ್ ಇಂಡಿಯಾ, ಈಗ ಬ್ರಿಸ್ಬೇನ್ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಮೇಲೆ ತನ್ನ ಚಿತ್ತ ನೆಟ್ಟಿದೆ. ಆದರೆ ಟೀಮ್ ಇಂಡಿಯಾದ ಬಹುತೇಕ ಆಟಗಾರರು ಇಂಜುರಿಗೆ ಒಳಗಾಗಿರುವ ಕಾರಣ, ಅಂತಿಮ ಟೆಸ್ಟ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರನ್ನ ಆಡಿಸೋದು ಅನ್ನೋದೆ ಈಗ ಪ್ರಶ್ನೆಯಾಗಿದೆ.
ಟಾಪ್ ಆರ್ಡರ್ ಫಿಕ್ಸ್, ಮಿಡಲ್ ಆರ್ಡರ್ನಲ್ಲಿ ಯಾರು..?
ತಂಡದ ಬಹುತೇಕ ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ, ಟೀಮ್ ಇಂಡಿಯಾದ ಟಾಪ್ ಆರ್ಡರ್ಗೆ ಮಾತ್ರ ಯಾವುದೇ ಸಮಸ್ಯೆ ಇಲ್ಲ. ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಆರಂಭಿಕರಾಗಿ ಲಭ್ಯರಿದ್ದಾರೆ. ಚೇತೇಶ್ವರ ಪೂಜಾರ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸ್ತಾರೆ. ಆದರೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಗೆ ಚಿಂತಿಸಿದರೆ, ಮಾತ್ರ ಆರಂಭಿಕರ ಬದಲಾವಣೆ ಮಾಡಬಹುದಾಗಿದೆ.
ಅಸಲಿ ಸಮಸ್ಯೆ ಹುಟ್ಟಿಕೊಂಡಿರುವುದು ಮಿಡಲ್ ಆರ್ಡರ್ನಲ್ಲಿ, ಹೌದು ನಾಲ್ಕನೇ ಕ್ರಮಾಂಕದಲ್ಲಿ ಅಜಿಂಕ್ಯಾ ರಹಾನೆ ಪಕ್ಕಾ. ನಂತರದ ಹನುಮ ವಿಹಾರಿ, ಜಡೇಜಾ ಸ್ಥಾನದಲ್ಲಿ ಆಡುವುದು ಯಾರು? ಅನ್ನೋದೇ ಪ್ರಶ್ನೆ. ಇದಕ್ಕೆ ಮಯಾಂಕ್ ಅಗರ್ವಾಲ್ರನ್ನ ಪ್ರಯೋಗಕ್ಕಿಳಿಸುವ ಆಯ್ಕೆ ತಂಡದ ಮುಂದಿತ್ತು, ಆದರೆ ಸದ್ಯ ಮಯಾಂಕ್ ಇಂಜುರಿಯ ಕಾರಣ, ಆಡುವುದು ಅನುಮಾನ ಎನ್ನಲಾಗ್ತಿದೆ. ಇದರಿಂದಾಗಿ ವೃದ್ಧಿಮಾನ್ ಸಾಹ, ಪೃಥ್ವಿ ಶಾ ಅಂತಿಮ ಟೆಸ್ಟ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಸ್ಪಿನ್ನರ್ಸ್ ಯಾರು..? ಪೇಸರ್ಸ್ ಯಾರು..?
ಸ್ಪಿನ್ನರ್ಸ್ ಕೋಟಾದಲ್ಲಿ ಸ್ಥಾನ ಪಡೆದಿದ್ದ ರವೀಂದ್ರ ಜಡೇಜಾ, ಸರಣಿಯಿಂದಲೇ ಔಟ್ ಆಗಿದ್ದಾರೆ. ಸಿಡ್ನಿಯ ಅಂತಿಮ ದಿನ ಪೇನ್ ಕಿಲ್ಲರ್ ತೆಗೆದುಕೊಂಡು ಬ್ಯಾಟ್ ಬೀಸಿದ್ದ ಅಶ್ವಿನ್ ಕೂಡ, ಸ್ಕ್ಯಾನಿಂಗ್ಗೆ ಒಳಪಟ್ಟಿದ್ದಾರೆ. ಆದರೆ ಬಿಸಿಸಿಐ ಮೂಲಗಳ ಪ್ರಕಾರ ಅಶ್ವಿನ್, ಬ್ರಿಸ್ಬೇನ್ ಟೆಸ್ಟ್ಗೆ ಫಿಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಜಡೇಜಾ ಸ್ಥಾನದಲ್ಲಿ ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್ ಕಣಕ್ಕಿಳಿಸುವ ಸಾಧ್ಯತೆಯಿದೆ. ಆದರೆ ನೆಟ್ ಬೌಲರ್ ಆಗಿ ತಂಡದ ಜೊತೆ ವಾಷಿಂಗ್ಟನ್ ಸುಂದರ್ ಉಳಿದುಕೊಂಡಿರೋದ್ರಿಂದ, ಅಂತಿಮ ಕ್ಷಣದಲ್ಲಿ ಸುಂದರ್ ಕಣಕ್ಕಿಳಿದರು ಅಚ್ಚರಿಯಿಲ್ಲ.
ಮತ್ತೊಂದೆಡೆ ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ, ಅಲಭ್ಯತೆಯ ಹಿನ್ನೆಲೆಯಲ್ಲಿ ಅನಾನುಭವಿ ಸಿರಾಜ್, ನವದೀಪ್ ಸೈನಿ ವೇಗದ ಬೌಲಿಂಗ್ ವಿಭಾಗವನ್ನ ಮುನ್ನಡೆಸಬೇಕಾಗುತ್ತೆ. ಆದರೆ ತ್ರಿವಳಿ ವೇಗಿಗಳು ಕಣಕ್ಕಿಳಿಯುವ ಕಾರಣ ಶಾರ್ದೂಲ್ ಠಾಕೂರ್, ಟಿ.ನಟರಾಜನ್, ಇಬ್ಬರಲ್ಲಿ ಒಬ್ಬರು ಬ್ರಿಸ್ಬೇನ್ ಟೆಸ್ಟ್ನಲ್ಲಿ ಆಡೋದು ಕನ್ಫರ್ಮ್ ಆಗಿದೆ. ಆದರೆ ಇದೆಲ್ಲವೂ ಟೀಮ್ ಕಾಂಬಿನೇಷನ್ ಮೇಲೆಯೇ ನಿಂತಿದೆ. ಒಟ್ನಲ್ಲಿ ಟೀಮ್ ಇಂಡಿಯಾ ಕಾಂಬಿನೇಷನ್ ಸೆಟ್ ಮಾಡುವುದು ಟೀಮ್ ಮ್ಯಾನೇಜ್ಮೆಂಟ್ಗೆ ಚಾಲೆಂಜಾಗಿದ್ದು, ಅಂತಿಮ ಕ್ಷಣದಲ್ಲಿ ಯಾರಿಗೆ ಮಣೆ ಹಾಕ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post