‘ಜಂಟಲ್ಮನ್’ ಸಿನಿಮಾದ ಮೂಲಕ ನಿರ್ಮಾಪಕರಾದ, ನಿರ್ದೇಶಕ ಗುರು ದೇಶ್ಪಾಂಡೆ ಸದ್ಯ ಮತ್ತೊಂದು ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅಂತಿಂತ ಸಿನಿಮಾವಲ್ಲ; ಐದು ಕಥೆಗಳನ್ನ ಒಳಗೊಂಡ ‘ಪೆಂಟಗನ್.’ ಐದು ಕಥೆಗಳ ಸಿನಿಮಾ ಆಗಿರುವ ಕಾರಣಕ್ಕೋ ಏನೋ, ಸಿನಿಮಾಗೆ ‘ಪೆಂಟಗನ್’ ಅಂತಾನೇ ಹೆಸರಿಡಲಾಗಿದೆ. ಸದ್ಯ ನಿನ್ನೆ ಸಿನಿಮಾದ ಟೈಟಲ್ ಪೋಸ್ಟರ್ ಲಾಂಚ್ ಮಾಡಿ, ಇಂದು ಮೊದಲ ಕಥೆಯ ಪೋಸ್ಟರ್ ರಿಲೀಸ್ ಮಾಡಿದೆ ಚಿತ್ರತಂಡ. ಹೌದು.. “ಒನ್ ಪೆಗ್, ಒನ್ ಶಾಟ್” ಅನ್ನೋ ಶೀರ್ಷಿಕೆಯೊಂದಿಗೆ ‘ಪೆಂಟಗನ್’ ಸಿನಿಮಾದ ಮೊದಲ ಕಥೆಯ ಹೆಸರನ್ನ ರಿವೀಲ್ ಮಾಡಲಾಗಿದೆ.
ಐದು ನಿರ್ದೇಶಕರ, ಐದು ಕಥೆಗಳನ್ನ ಒಳಗೋಡ ಸಂಕಲನ ಚಿತ್ರ ಇದಾಗಿದ್ದು, ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ‘ಲವ್ ಮಾಕ್ಟೈಲ್’ ಖ್ಯಾತಿಯ ಡಾರ್ಲಿಂಗ್ ಕೃಷ್ಣ, ನಿನ್ನೆ ‘ಪೆಂಟಗನ್’ ಟೈಟಲ್ ರಿವೀಲ್ ಮಾಡಿ ಪೋಸ್ಟರ್ ಲಾಂಚ್ ಮಾಡಿದ್ದರು. ಇದೀಗ ಜನವರಿ 18ರಂದು ‘ಪೆಂಟಗನ್’ ಸಿನಿಮಾದ ಮೋಶನ್ ಪೋಸ್ಟರ್ ರಿಲೀಸ್ ಆಗಲಿದೆ.
ಮೊದಲ ಕಥೆಯ ಮೊದಲ ಥೀಮ್ ಪೋಸ್ಟರ್ ಬಿಡುಗಡೆ ಮಾಡಿ ನಿರ್ದೇಶಕ ಗುರು ದೇಶ್ಪಾಂಡೆಯ ‘ಜಿ ಸಿನಿಮಾಸ್’ ಸದ್ಯ ಸುದ್ದಿಯಾಗಿದೆ. “ನೀವು ಕುಡಿದಿದ್ದರೇ, ಮನೆಯಲ್ಲಿಯೇ ಇರಿ” ಅನ್ನೋ ಟ್ಯಾಗ್ ಲೈನ್ ಅನ್ನು ಕೂಡ ‘ಪೆಂಟಗನ್’ ಚಿತ್ರದ ಮೊದಲ ಕಥೆ ಹೊತ್ತು ತಂದಿದೆ.
Stay home if you are drunk!
Happy to share with you
Pentagon's first theme poster for the first story.Motion poster on 18th January
Stay tuned for more updates.#pentagon #gcinemas #gurudeshpande #rachitha #motion_poster#18th_january pic.twitter.com/J7oEh7R10u— Guru Deshpande (@deshpandeguru1) January 13, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post