ಬೆಂಗಳೂರು: ಅಸಮಾಧಾನಗೊಂಡಿರುವ ಹೆಚ್. ನಾಗೇಶ್ ಅವರನ್ನ ಸಿಎಂ ಬಿ.ಎಸ್. ಯಡಿಯೂರಪ್ಪ ಸಮಾಧಾನಪಡಿಸಲು ಮುಂದಾಗಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಿಕೊಂಡ ಬೆನ್ನಲ್ಲೇ ನಾಗೇಶ್ಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸ್ಥಾನವನ್ನ ನೀಡಿದ್ದಾರೆ.
ಸಿಎಂ ಬಿಎಸ್ವೈ ಇಂದು ಹೆಚ್.ನಾಗೇಶ್ ಅವರಿಂದ ರಾಜೀನಾಮೆ ಕೊಡಿಸಿಕೊಂಡು ಸಚಿವ ಸಂಪುಟ ವಿಸ್ತರಣೆ ಮಾಡಿದರು. ಸಚಿವ ಸ್ಥಾನವನ್ನ ವಾಪಸ್ ಪಡೆದಿದ್ದಕ್ಕೆ ನಾಗೇಶ್ ಹಾಗೂ ಅವರ ಬೆಂಬಲಿಗರು ಅಸಮಾಧಾನ ಹೊರಹಾಕಿದ್ದರು.
ಇದೀಗ ಹೆಚ್.ನಾಗೇಶ್ ಅವರಿಗೆ ಸಿಎಂ ಬಿಎಸ್ವೈ ಸಂಪುಟ ದರ್ಜೆಯ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನ ನೀಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post