ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ15,968 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕಳೆದ ಒಂದು ದಿನದಲ್ಲಿ202 ಸೋಂಕಿತರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈವರೆಗೆ ವರದಿಯಾದ ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆ 1,04,95,147ಕ್ಕೆ ಏರಿದೆ.
ಈವರೆಗೆ 1,51,529 ಮಂದಿ ಸೋಂಕಿಗೆ ಬಲಿಯಾದಂತಾಗಿದೆ. ದೇಶದಲ್ಲಿ ಒಟ್ಟು 2,14,507 ಆ್ಯಕ್ಟಿವ್ ಕೇಸ್ಗಳಿದ್ದು, ಇಲ್ಲಿವರೆಗೆ 1,01,29,111ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆಗಳಲ್ಲಿ17,817 ಜನರ ಡಿಸ್ಚಾರ್ಜ್ ಆಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಇಂದಿನ ಅಂಕಿ ಅಂಶಗಳು
- ಹೊಸ ಪ್ರಕರಣಗಳು –15,968
- ಒಟ್ಟಾರೆ ಪ್ರಕರಣಗಳು –1,04,95,147
- 24 ಗಂಟೆಯಲ್ಲಿ ಮೃತಪಟ್ಟವರು –202
- ಒಟ್ಟಾರೆ ಮೃತಪಟ್ಟವರು –1,51,529
- ಸಕ್ರಿಯ ಪ್ರಕರಣಗಳು –2,14,507
- ಒಟ್ಟಾರೆ ಗುಣಮುಖರಾದವರು –1,01,29,111
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post