ಬಳ್ಳಾರಿ: ಗೋ ಮಾಂಸೆ ಸೇವನೆ ಮಾಡ್ತಿನಿ ಅನ್ನೋ ಸಿದ್ದರಾಮಯ್ಯಗೆ ಶಿಕ್ಷೆಯಾಗಬೇಕು. ಗೋ ಮಾಂಸ ತಿಂತಿನಿ ಅಂದೋರಿಗೂ ಶಿಕ್ಷೆಯಾಗುವ ಹಾಗೆ ಕಾಯ್ದೆಗೆ ತಿದ್ದುಪಡಿ ತರೋಣ ಎಂದು ಸಚಿವ ಜಗದೀಶ ಶೆಟ್ಟರ್ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣಗೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ನಡೆದ ಜನಸೇವಕ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಸೂಧೆಯನ್ನ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತಿದ್ದುಪಡಿ ಮಾಡಿ ಅನುಷ್ಠಾನ ಮಾಡೋಣ. ಹಿಂದುಗಳು ಗೋ ಮಾತೆಯನ್ನ ಅತ್ಯಂತ ಪವಿತ್ರ ಸ್ಥಾನದಲ್ಲಿ ಪೂಜೆ ಮಾಡ್ತಾರೆ. ಆದರೆ, ಇದರ ಪರಿಜ್ಞಾನ ವಿಲ್ಲದ ಸಿದ್ದರಾಮಯ್ಯ ಗೋ ಹತ್ಯೆ ಸಮರ್ಥಿಸಿಕೊಳ್ಳೋದಲ್ಲದೇ ತಿಂತಿನಿ ಅಂತಾರೆ. ಇಂಥವರನ್ನ ಏನು ಮಾಡಬೇಕು. ಕೇವಲ ಗೋ ಮಾತೆ ವಧೆ ಮಾಡುವವರಿಗೆ ಶಿಕ್ಷೆ ಕೊಡೋಕೆ ನೂತನ ಕಾಯ್ದೆಯಲ್ಲಿ ಅವಕಾಶವಿದೆ. ಹೀಗಾಗಿ ಕಾಯ್ದೆಗೆ ತಿದ್ದುಪಡಿ ತಂದು ಗೋ ಮಾಂಸ ತಿಂತಿನಿ ಅನ್ನೋರಿಗೆ ಶಿಕ್ಷೆ ಕೊಡಿಸೋಣ ಎಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post