ನಿರ್ದೇಶಕ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳ್ತಿರುವ ‘ಫ್ಯಾಂಟಮ್’ ಸಿನಿಮಾ ಶೂಟಿಂಗ್ನ ಕೊನೆಯ ಹಂತಕ್ಕೆ ಬಂದು ತಲುಪಿದೆ. ಇನ್ನೇನು 15 ದಿನಗಳ ಶೂಟ್ ಮಾಡಿದ್ರೆ, ‘ಫ್ಯಾಂಟಮ್’ ಸಿನಿಮಾ ಕಂಪ್ಲೀಟ್. ಇದೇ ಸುದ್ದಿಯ ಜೊತೆ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಕೂಡ ಹೊರ ಬಿದ್ದಿದೆ. ಯೆಸ್.. ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಕಿಚ್ಚನ ಜೊತೆ ‘ಫ್ಯಾಂಟಮ್’ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಅನ್ನೋ ವಿಷಯ ಬಲ್ಲ ಮೂಲಗಳಿಂದ ಕೇಳಿ ಬರ್ತಿದೆ.
ಹೌದು.. ಪ್ಯಾನ್ ಇಂಡಿಯಾ ಸಿನಿಮಾವಾಗಿ ರಿಲೀಸ್ ಆಗಲಿರುವ ‘ಫ್ಯಾಂಟಮ್’, ಪ್ರತಿ ಬಾರಿ ಹೊಸ ವಿಚಾರಗಳಿಂದ ಸಿಕ್ಕಾಪಟ್ಟೆ ಸುದ್ದಿಯಾಗ್ತಿದೆ. ಜ್ಯಾಕ್ವೆಲಿನ್ ಫರ್ನಾಂಡಿಸ್ ಕಿಚ್ಚನ ಜೊತೆ ಹೆಜ್ಜೆ ಹಾಕಲಿದ್ದಾರೆ ಅನ್ನೋದು ಸದ್ಯ ಹೊಸ ವಿಚಾರ. ಈ ಹಾಡಿನ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದೆ ಅಂತ ಚಿತ್ರತಂಡ ತಿಳಿಸಿದೆ. ಸದ್ಯ ಚಿತ್ರತಂಡ, ಕೇರಳದಲ್ಲಿ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ವಾಪಾಸಾಗಿದೆ. ಮುಂದಿನ 15 ದಿನಗಳ ಕಾಲ ಚಿತ್ರೀಕರಣ ನಡೆಸಿ ಅಲ್ಲಿಗೆ ಕುಂಬಳಕಾಯಿ ಹೊಡೆಯಲಿದ್ದೇವೆ ಅಂತಾರೆ ‘ಫ್ಯಾಂಟಮ್’ ನಿರ್ದೇಶಕರು.
ಇನ್ನು, ವಿಕ್ರಾಂತ್ ರೋಣನಾಗಿ ಕಾಣಿಸಿಕೊಳ್ಳಲಿರುವ ಕಿಚ್ಚ ಸುದೀಪ್ ಜೊತೆಗೆ ನಟ ನಿರೂಪ್ ಭಂಡಾರಿ ಹಾಗೂ ನೀತಾ ಅಶೋಕ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜ್ಯಾಕ್ ಮಂಜು ‘ಫ್ಯಾಂಟಮ್’ಗೆ ಬಂಡವಾಳ ಹೂಡಿದ್ದು, ಅಜನೀಶ್ ಲೋಕ್ನಾಥ್ ಸಂಗೀತ ನೀಡಲಿದ್ದಾರೆ.
-ವಿಶೇಷ ವರದಿ: ರಕ್ಷಿತಾ ರೈ, ಫಿಲ್ಮ್ ಬ್ಯೂರೋ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post