ಬೆಂಗಳೂರು: ರಾಜ್ಯ ಸರ್ಕಾರ ಇಂದು ಸಂಪುಟ ವಿಸ್ತರಣೆ ಮಾಡಿದ್ದು ನೂತನ ಸಚಿವರಾಗಿ 7 ಮಂದಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಪ್ರಮಾಣವಚನ ಸ್ವೀಕರಿಸಿದ ನಂತರ ಸಿಎಂ ಬಿ.ಎಸ್.ಯಡಿಯೂರಪ್ಪರನ್ನ ಭೇಟಿಯಾಗಿ ಹೊರಬಂದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನೂತನ ಸಚಿವ ಆರ್.ಶಂಕರ್.. ಸಂಪುಟ ವಿಸ್ತರಣೆ ತಡವಾಯ್ತು ತಡವಾಯ್ತು ಅಂತ ಹೇಳಲಾಗುತ್ತಿತ್ತು. ಇದೀಗ ಸಂಕ್ರಾಂತಿಗೆ ಹೊಸ ಪರ್ವ ಆರಂಭವಾಗಿದೆ. ಎಲ್ಲವೂ ಒಳ್ಳೆಯದಾಗ್ಲಿ, ಒಳ್ಳೆಯ ಕೆಲಸ ಮಾಡಿಕೊಂಡು ಹೋಗಿ ಅಂತ ಸಿಎಂ ಬಿಎಸ್ವೈ ಸೂಚಿಸಿದ್ದಾರೆ. ಈಗಾಗಲೇ ವಿಧಾನಸೌಧದಲ್ಲಿ ಕೊಠಡಿಯನ್ನೂ ಮಂಜೂರು ಮಾಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಶೀಘ್ರವೇ ಮುನಿರತ್ನ ಅವರಿಗೂ ಸಚಿವ ಸ್ಥಾನ ಸಿಗಲಿದೆ
ಮುನಿರತ್ನ ಅವರಿಗೆ ಸಚಿವ ಸ್ಥಾನ ಸಿಗದ ವಿಚಾರವಾಗಿ ಪ್ರತಿಕ್ರಿಯಿಸಿ.. ಸಿಎಂ ಜೊತೆ ಈಗಾಗಲೇ ಮಾತುಕತೆ ಮಾಡಿ, ಅವರ ಮನವೊಲಿಸಲಾಗಿದೆ. ಶೀಘ್ರವೇ ಅವರಿಗೂ ಸಚಿವ ಸ್ಥಾನ ಸಿಗಲಿದೆ. ಈ ವಿಚಾರವಾಗಿ ಹೈಕಮಾಂಡ್ ಜೊತೆ ಮಾತುಕತೆ ಮಾಡಲಿದ್ದಾರೆ. ಮುನಿರತ್ನ ಅವರಿಗೂ ಒಳ್ಳೆಯ ದಿನ ಬರಲಿದೆ. ಸಿಎಂ ಒಳ್ಳೆಯ ಖಾತೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಶೀಘ್ರವೇ ಯಾವ ಖಾತೆ ಅನ್ನೋದು ತಿಳಿಯಲಿದೆ ಎಂದು ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post