ನವದೆಹಲಿ: ಜನವರಿ 16ರಿಂದ ದೇಶದಲ್ಲಿ ಕೊರೊನಾ ವ್ಯಾಕ್ಸಿನೇಷನ್ ವಿತರಣೆ ಆರಂಭವಾಗಲಿದ್ದು, ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ಕೊರೊನಾ ವಾರಿಯರ್ಸ್ ಲಸಿಕೆ ಪಡೆಯಲಿದ್ದಾರೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಲಸಿಕೆಗೆ ಭಾರತ ಅಪ್ರೂವಲ್ ನೀಡಿದ್ದು, ಈ ಎರಡು ಲಸಿಕೆಗಳನ್ನ ಹಾಕಲಾಗುತ್ತದೆ. ಆದ್ರೆ ಲಸಿಕೆ ಪಡೆಯುವವರು ತಮಗೆ ಈ ಎರಡರಲ್ಲಿ ಯಾವ ಲಸಿಕೆ ಹಾಕಬೇಕು ಎಂದು ಹೇಳುವ ಆಯ್ಕೆ ನೀಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಹಲವಾರು ದೇಶಗಳಲ್ಲಿ ಒಂದಕ್ಕಿಂತ ಹೆಚ್ಚು ಕೊರೊನಾ ಲಸಿಕೆಯನ್ನ ಬಳಸಲಾಗ್ತಿದೆ. ಆದ್ರೆ ಈ ಯಾವ ದೇಶದಲ್ಲೂ ಲಸಿಕೆ ಪಡೆಯುವವರಿಗೆ ಯಾವ ವ್ಯಾಕ್ಸಿನ್ ತೆಗೆದುಕೊಳ್ಳಬೇಕು ಎಂದು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನ ನೀಡಿಲ್ಲ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post