ನಟ ನಿಖಿಲ್ ಕುಮಾರ್ ನಾಲ್ಕನೇ ಸಿನಿಮಾ ‘ರೈಡರ್’ ಈಗಾಗಲೇ ಶೂಟಿಂಗ್ ಅಂಗಳದಲ್ಲಿದೆ. ಶೇಕಡ 40ರಷ್ಟು ಚಿತ್ರೀಕರಣ ಮುಗಿಸಿರುವ ‘ರೈಡರ್’ ಚಿತ್ರತಂಡ, ಇದೀಗ ಟೀಸರ್ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ. ಹೌದು.. ನಿಖಿಲ್ ಕುಮಾರ್ ಹುಟ್ಟುಹಬ್ಬದ ದಿನವೇ ಟೀಸರ್ ರಿಲೀಸ್ ಮಾಡ್ತಿದೆ ‘ರೈಡರ್’ ಚಿತ್ರತಂಡ.
ಜನವರಿ 22ರಂದು ನಿಖಿಲ್ ಕುಮಾರ್ ಹುಟ್ಟುಹಬ್ಬವಿದ್ದು, ಅದೇ ದಿನ ‘ರೈಡರ್’ ಟೀಸರ್ ಅಭಿಮಾನಿಗಳಿಗೆ ತಲುಪಿಸುವ ಇರಾದೆ ಚಿತ್ರತಂಡದ್ದು. ಈಗಾಗಲೇ ಜಬರ್ದಸ್ತ್ ಪೋಸ್ಟರ್ ಮೂಲಕ ‘ರೈಡರ್’ ನಿಖಿಲ್ ಫಸ್ಟ್ ಲುಕ್ ಲಾಂಚ್ ಆಗಿತ್ತು. ಇದೀಗ ಟೀಸರ್ ಬಿಡುಗಡೆ ಮಾಡುತ್ತಿರೋ ಬಗ್ಗೆ ತಿಳಿಸೋದಕ್ಕೆ ಮತ್ತೊಂದು ಪೋಸ್ಟರ್ ಡಿಸೈನ್ ಮಾಡಿದೆ. ಇನ್ನೂ ಹತ್ತು ದಿನಗಳು ಬಾಕಿ ಇರುವಂತೆಯೇ, ಟೀಸರ್ ರಿಲೀಸ್ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ವಿಜಯ್ ಕುಮಾರ್ ಕೊಂಡ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಅರ್ಜುನ್ ಜನ್ಯಾ ಸಂಗೀತ ನೀಡಲಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post