ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ನಟಿಸಿ ಮಿಂಚಿರುವ ರಶ್ಮಿಕಾ, ಸದ್ಯ ಬಾಲಿವುಡ್ನಲ್ಲಿ ಸದ್ದು ಮಾಡ್ತಿದ್ದಾರೆ. ಫೇಮಸ್ ಱಪರ್ ಬಾದ್ ಷಾ ಆಲ್ಬಂ ಸಾಂಗ್ನಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಈ ಆಲ್ಬಂ ಸಾಂಗ್ ಶೂಟಿಂಗ್ ನಡೆದಿದ್ದು, ಇಂದು ಹಾಡಿನ ಹೆಸರಿನ ಜೊತೆಗೆ ಪೋಸ್ಟರ್ ಲಾಂಚ್ ಮಾಡಲಾಗಿದೆ. ‘ಟಾಪ್ ಠಕ್ಕರ್’ ಅನ್ನೋ ಹೆಸರಿನಲ್ಲಿ ಸಾಂಗ್ ರೆಡಿ ಮಾಡಿದ್ದಾರೆ ಬಾದ್ ಷಾ, ಅಮಿತ್ ಉಚಾನಾ ಹಾಗೂ ರಶ್ಮಿಕಾ ಮಂದಣ್ಣ ಟೀಂ.
ಇದು ರಶ್ಮಿಕಾರ ಮೊದಲ ಹಿಂದಿ ಆಲ್ಬಂ ಆಗಿದ್ದು, ಈ ಹಾಡು ಹಿಂದಿ ಹಾಗೂ ತಮಿಳಿನಲ್ಲಿ ರಿಲೀಸ್ ಆಗಲಿದೆ. ಸದ್ಯದಲ್ಲೇ ಈ ಮ್ಯೂಸಿಕ್ ವಿಡಿಯೋ ಸಾಂಗ್ ಬಿಡುಗಡೆ ಮಾಡಲು ‘ಟಾಪ್ ಠಕ್ಕರ್’ ತಂಡ ನಿರ್ಧರಿಸಿದೆ. ಚಂಡೀಘಡದಲ್ಲಿ ಈ ಆಲ್ಬಂ ಸಾಂಗ್ ಚಿತ್ರೀಕರಣ ಶುರುವಾಗಿದ್ದು, ಇದೇ ಮೊದಲ ಬಾರಿಗೆ ರಶ್ಮಿಕಾ ಆಲ್ಬಂ ಸಾಂಗ್ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಜೆಟ್ನಲ್ಲಿ ತಯಾರಾಗುತ್ತಿರುವ ಈ ಹಾಡಿಗೆ ‘ಯಶ್ ರಾಜ್ ಫೀಲ್ಮ್ಸ್’ ಬಂಡವಾಳ ಹೂಡಿದ್ದಾರೆ.
ಇದಲ್ಲದೇ, ರಶ್ಮಿಕಾ ಮಂದಣ್ಣ ಬಾಲಿವುಡ್ ಕದವನ್ನೂ ತಟ್ಟಿದ್ದಾರೆ. ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ನಟಿಸಲಿರುವ ‘ಮಿಷನ್ ಮಜ್ನು’ ಸಿನಿಮಾದಲ್ಲಿ ನ್ಯಾಷನಲ್ ಕ್ರಷ್ ರಶ್ಮಿಕಾ ನಾಯಕಿಯಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಸದ್ಯ ರಶ್ಮಿಕಾ, ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
Ladies and gentlemen presenting to you. 🗣 🥳✨@Its_Badshah @jonitamusic @AmitUchana @Saga_Hits @SumeetSinghM @thisisysr @yrf @MTVBeats @FeverFMOfficial pic.twitter.com/0xBJymd1Td
— Rashmika Mandanna (@iamRashmika) January 13, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post