ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಗ್ರಾಪಂ ಸದಸ್ಯರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಮನೆ ಕಟ್ಟಿಸುತ್ತಿರುವ ಕುರಿತು ಮಾಹಿತಿ ನೀಡಿದ್ರು.
ಜಯ ದೇವರಾಜ್ ಅರಸ್ ವಿರುದ್ಧ ಯಾರೂ ಅಭ್ಯರ್ಥಿ ಇಲ್ಲ ಅಂತ ನನ್ನನ್ನ ಕಣಕ್ಕಿಳಿಸಿದ್ರು. ಹಣ ಇಲ್ಲ ಎಂದಾಗ ಅವರೇ ಖರ್ಚು ಮಾಡಿ ಗೆಲ್ಲಿಸಿದ್ರು. ಇನ್ನೊಂದು ಎಲೆಕ್ಷನ್‌ನಲ್ಲಿ 3 ಲಕ್ಷ ರೂಪಾಯಿ ಸಂಗ್ರಹವಾಯ್ತು. ಅದ್ರಲ್ಲಿ ಎರಡು ಲಕ್ಷ ಖರ್ಚಾಯ್ತು.. ಉಳಿದ ಒಂದು ಲಕ್ಷದಲ್ಲಿ ಗೆಳೆಯ ಫ.ಮಲ್ಲೇಶ್ ಲೋನ್ ಕೊಡ್ಸಿ ಮನೆ ಕಟ್ಟಿಸಿಕೊಟ್ಟಿದ್ದ. ಆ ಮನೆಯನ್ನೂ ನಾನು ಮಾರಿಬಿಟ್ಟೆ ಎಂದಿದ್ದಾರೆ.
ಮುಂದುವರೆದು ಇಲ್ಲಿಯವರೆಗೂ ನನಗೆ ಮೈಸೂರಿನಲ್ಲಿ ಮನೆ ಇರಲಿಲ್ಲ. ಈಗ ಮೈಸೂರಿನಲ್ಲಿ ಮನೆ ಕಟ್ಟುತ್ತಿದ್ದೇನೆ. ರಾಜಕಾರಣ ಮುಗಿದ ಮೇಲೆ ಇಲ್ಲೇ ಇರಬೇಕೆಂದು ಮನೆ ಕಟ್ಟುತ್ತಿದ್ದೇನೆ. ನಮ್ಮಪ್ಪನನ್ನ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸೋಲಿಸಿದ್ರು. ಬಳಿಕ ನಾನು ತಾಲ್ಲೂಕು ಬೋರ್ಡ್‌ಗೆ ನಿಲ್ಲಬೇಕೆಂದಾಗ ಬೇಡ ಅಂತ ನಮ್ಮಪ್ಪ ಪಟ್ಟು ಹಿಡಿದ್ರು. ಜನತೆ ತಂದೆಯನ್ನ ಒಪ್ಪಿಸಿ ಕಣಕ್ಕಿಳಿಸಿದ್ರು ಎಂದು ಹಳೆಯ ನೆನಪುಗಳನ್ನ ಸಿದ್ದರಾಮಯ್ಯ ಮೆಲುಕು ಹಾಕಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post