ನಟ ಕಿಚ್ಚ ಸುದೀಪ್ ತಮ್ಮ ನಟನೆಯಿಂದ ಮಾತ್ರವಲ್ಲ, ಒಂದಿಲ್ಲೊಂದು ಕೆಲಸಗಳಿಂದ ಅಭಿಮಾನಿಗಳನ್ನ ಗೆಲ್ಲುತ್ತಲೇ ಇರುತ್ತಾರೆ. ಯಾರಾದ್ರೂ ಸಹಾಯ ಅಂದ್ರೆ ಸಾಕು, ಕಿಚ್ಚ ತಮ್ಮ ಸಹಾಯ ಹಸ್ತ ನೀಡ್ತಾರೆ. ಇದೀಗ ತಮ್ಮ ಜೊತೆಗಾರನಿಗೆ ಬ್ರ್ಯಾಂಡ್ ನ್ಯೂ ರಾಯಲ್ ಎನ್ಫೀಲ್ಡ್ ಬೈಕ್ ಕೊಡಿಸಿ ಮತ್ತೆ ಮನೆಮಾತಾಗಿದ್ದಾರೆ. ಹೌದು.. ಆರು ವರ್ಷಗಳಿಂದ ಕಿಚ್ಚ ಸುದೀಪ್ ಜೊತೆಗಿರುವ ಸಾಯಿ ಕಿರಣ್ಗೆ, ಸಂಕ್ರಾಂತಿ ಹಬ್ಬಕ್ಕೆ ಕಿಚ್ಚ ಗಿಫ್ಟ್ ಆಗಿ ರಾಯಲ್ ಎನ್ಫೀಲ್ಡ್ ಬೈಕ್ ಕೊಡಿಸಿದ್ದಾರೆ.
ಆರು ವರ್ಷಗಳಿಂದ ನಟ ಸುದೀಪ್ ಅವರ ಜೊತೆಗಿರುವ ಸಾಯಿ ಕಿರಣ್, ಕಿಚ್ಚನ ಅಪ್ಪಟ ಅಭಿಮಾನಿ. ಇಂದು ಮೊನ್ನೆಯಿಂದಲ್ಲ, ಸುದೀಪ್ ಮೊದಲ ಸಿನಿಮಾದಿಂದಲೂ. ಇದೇ ಪ್ರೀತಿಯಿಂದ ತಮ್ಮ ಹೆಸರಿನ ಮುಂದೆ ಕಿಚ್ಚ ಅಂತ ಸೇರಿಸಿಕೊಂಡು, ‘ಕಿಚ್ಚ ಸಾಯಿ ಕಿರಣ್’ ಅಂತಲೇ ಕರೆಸಿಕೊಳ್ತಾರೆ.
ಸಂಕ್ರಾಂತಿ ಹಬ್ಬಕ್ಕೆ ಊಹಿಸಲೂ ಆಗದ ಉಡುಗೊರೆ ಸಿಕ್ಕಿರೋದಕ್ಕೆ ಸಾಯಿ ಕಿರಣ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ತಮ್ಮ ದೇವರಿಂದ ಇದು ತಮಗೆ ಸರ್ಪ್ರೈಸ್ ಅಂತಿದ್ದಾರೆ. ಈ ಬಗ್ಗೆ ಕಿಚ್ಚ ಸಾಯಿ ಕಿರಣ್ ಖುಷಿಯಿಂದಲೇ ನ್ಯೂಸ್ ಫಸ್ಟ್ ಜೊತೆ ಮಾತನಾಡಿದ್ದಾರೆ.
‘ಇದು ನನಗೆ ನನ್ನ ದೇವರ ಗಿಫ್ಟ್. ತುಂಬಾ ಸರ್ಪ್ರೈಸ್ ಆಗಿದ್ದೀನಿ. ನಾನು ಇದನ್ನ ಊಹಿಸಿಯೇ ಇರ್ಲಿಲ್ಲ. ನಿಜಕ್ಕೂ ನಾನು ಪುಣ್ಯವಂತ. ಸುದೀಪಣ್ಣನಿಗೆ ನಾನು ಕೆಲಸ ಮಾಡ್ತಿರೋದೇ ನನ್ನ ಭಾಗ್ಯ. ನಾನು ತುಂಬಾ ಲಕ್ಕಿ ಅಂತಾನೇ ಹೇಳ್ತೀನಿ. ಆರು ವರ್ಷಗಳಿಂದ ಸುದೀಪಣ್ಣನ ಜೊತೆಗಿದ್ದೀನಿ. ಆದ್ರೆ, ಅವರ ಮೊದಲ ಸಿನಿಮಾ ಸ್ಪರ್ಶದಿಂದಲೂ ನಾನು ಅವರ ಅಪ್ಪಟ ಅಭಿಮಾನಿ. ಅವರಿಗೆ ಹಾಗೂ ಅವರ ಇಡೀ ಕುಟುಂಬಕ್ಕೆ ನಾನು ಯಾವತ್ತೂ ಚಿರರುಣಿ. ನನ್ನ ಜೀವನದ ಅಂತ್ಯದವರೆಗೂ ಸುದೀಪಣ್ಣ ಹಾಗೂ ಅವರ ಇಡೀ ಕುಟುಂಬದ ಜೊತೆಗಿರಬೇಕು ಅನ್ನೋದೇ ನನ್ನ ಆಸೆ. ನನಗೆ ಮೊದಲು ಸುದೀಪಣ್ಣನನ್ನ ಈ ಬೈಕ್ನಲ್ಲಿ ರೈಡ್ ಕರೆದುಕೊಂಡು ಹೋಗ್ಬೇಕು’ ಎಂದಿದ್ದಾರೆ ಕಿಚ್ಚ ಸಾಯಿ ಕಿರಣ್.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post