ಬೆಂಗಳೂರು: ಸಂಕ್ರಾಂತಿ ಹಬ್ಬಕ್ಕೆ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಸಿಹಿ ನೀಡಿದ್ದು, 6 ಕಿ.ಲೋ ಮೀಟರ್ ಉದ್ದದ ವಿಸ್ತರಿತ ಮಾರ್ಗವನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ಲೋಕಾರ್ಪಣೆ ಮಾಡಿದರು.
ನೂತನ ಹಸಿರು ಮಾರ್ಗದ ಉದ್ಘಾಟನೆ ವೇಳೆ ಸಚಿವರಾದ ಆರ್. ಅಶೋಕ್, ಸುರೇಶ್ ಕುಮಾರ್, ಸದಾನಂದ ಗೌಡ ಹಾಗೂ ವಿಶ್ವನಾಥ್ ಭಾಗಿಯಾಗಿದ್ದರು. ವಿಸ್ತರಿತ ಮಾರ್ಗ ಕೋಣನಕುಂಟೆ ಕ್ರಾಸ್, ದೊಡಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ ಮತ್ತು ಅಂಜನಾಪುರ ಸೇರಿ ಒಟ್ಟು 5 ಎಲಿವೇಟೆಡ್ ಮೆಟ್ರೋ ನಿಲ್ದಾಣವನ್ನು ಹೊಂದಿವೆ. ಜನವರಿ 15ರಿಂದ ರೈಲು ಸಂಚಾರ ಅಧಿಕೃತವಾಗಿ ಆರಂಭಗೊಳ್ಳಲಿದೆ.
ಈ ಮಾರ್ಗದ ಯೋಜನೆಯನ್ನು 500 ಕೋಟಿ ರೂಪಾಯಿಗಳಲ್ಲಿ ಅನುಷ್ಟಾನಗೊಳಿಸಲಾಗಿದ್ದು, 6.29 ಕಿಮೀ ಉದ್ದವಿದೆ. ಈ ಮಾರ್ಗದ ನಿರ್ಮಾಣ ಕಾರ್ಯ 2016ರಲ್ಲಿ ಆರಂಭವಾಗಿತ್ತು. ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 8 ಎಸ್ಕಲೇಟರ್ ಮತ್ತು 4 ಎಲಿವೇಟರ್ ಸೇರಿದಂತೆ ಒಟ್ಟು 40 ಎಸ್ಕಲೇಟರ್ ಮತ್ತು 20 ಎಲಿವೇಟರ್ಗಳನ್ನು ಅಳವಡಿಸಲಾಗಿದೆ. 5 ಹೊಸ ನಿಲ್ದಾಣದಲ್ಲಿ 1.2 ಮೆಗಾವ್ಯಾಟ್ ಸಾಮರ್ಥ್ಯದ ಸೌರಶಕ್ತಿ ಮೇಲ್ಚಾವಣಿಯನ್ನು ನಿರ್ಮಿಸಲಾಗುತ್ತಿದ್ದು, ಮಾರ್ಚ್ 2021ರ ಒಳಗೆ ಈ ಕಾರ್ಯ ಮುಕ್ತಾಯವಾಗಲಿದೆ.
ವಿಸ್ತರಣಾ ಮಾರ್ಗದಲ್ಲಿ ಕೆಲಸದ ದಿನಗಳಲ್ಲಿ ಯಲಚೇನಹಳ್ಳಿಯಿಂದ ಪ್ರತಿ 5 ಮತ್ತು ರೇಷ್ಮೆ ಸಂಸ್ಥೆಯಿಂದ 10 ನಿಮಿಷಗಳಿಗೆ ಒಂದು ರೈಲು ಭಾನುವಾರದಂದು ಯಲಚೇನಹಳ್ಳಿಯಿಂದ ಪ್ರತಿ 10 ಮತ್ತು ರೇಷ್ಮೆ ಸಂಸ್ಥೆಯಿಂದ 15 ನಿಮಿಷಕ್ಕೆ ಒಂದು ರೈಲು ಓಡಾಟ ನಡೆಸಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post