ಬೆಂಗಳೂರು: ಮೋಡ ಕವಿದ ವಾತಾವರಣ ಹಿನ್ನೆಲೆ ನಗರದ ಪ್ರಸಿದ್ಧ ಶ್ರೀ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶವಾಗುವ ದೃಶ್ಯ ಈ ಬಾರಿ ಕಂಡು ಬಂದಿಲ್ಲ.
ನೆಲಮಟ್ಟಕ್ಕಿಂತ 120 ಅಡಿ ಆಳದಲ್ಲಿರುವ ಗವಿ ಗಂಗಾಧರೇಶ್ವರ ಸ್ವಾಮಿಯ ಗರ್ಭಗುಡಿಯಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿಯ ದಿನ ಸೂರ್ಯ ರಶ್ಮಿ ಸ್ಪರ್ಶಿಸುವ ಮೂಲಕ ವಿಸ್ಮಯಕ್ಕೆ ಸಾಕ್ಷಿಯಾಗುತ್ತಿತ್ತು. ಆದರೆ ಈ ಬಾರಿ ಮೋಡದ ಕಾರಣದಿಂದ ಸೂರ್ಯ ರಶ್ಮಿ ಸ್ಪರ್ಶವಾಗಿಲ್ಲ. ಹೀಗಾಗಿ ನಾದಘೋಷದೊಂದಿಗೆ ಇಂದಿನ ಪೂಜೆ ಸಮಾಪ್ತಿಗೊಳಿಸಲಾಯಿತು.
ಈ ಬಗ್ಗೆ ಅಲ್ಲಿನ ಪ್ರಧಾನ ಅರ್ಚಕರಾದ ಸೋಮಸುಂದರ ದೀಕ್ಷಿತರು ಮಾತನಾಡಿದ್ದು, ನನ್ನ 53 ವರ್ಷಗಳ ಅವಧಿಯಲ್ಲಿ ಇದೇ ಮೊದಲು ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶವಾಗಿಲ್ಲ. ಎಲ್ಲರಿಗೂ ಶುಭವಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ. ಅಗೋಚರವಾಗಿ ಸೂರ್ಯ ರಶ್ಮಿ ಸ್ವರ್ಶವಾಗಿರಬಹುದು. ಪ್ರಕೃತಿಯ ಮುಂದೆ ಯಾವುದೂ ಹೆಚ್ಚಲ್ಲ, ಕಳೆದ ವರ್ಷ 2 ನಿಮಿಷ ಸೂರ್ಯ ರಶ್ಮಿ ಸ್ವರ್ಶದಿಂದ ಕೊರೊನಾದಂತಹ ಬಿಕ್ಕಟ್ಟಿನ ಸ್ಥಿತಿ ಬಂದಿತ್ತು. ಪ್ರಕೃತಿ ನಿಯಮದಿಂದ ಕೊರೊನಾ ತೊಲಗಲಿದೆ. ಇಂದಿನ ಬೆಳವಣಿಗೆ ಯುದ್ಧ ಸೂಚಕವಾಗಿದೆ. ಅತೀ ರುದ್ರ ಯಾಗವೊಂದೇ ಇದಕ್ಕೆ ಪರಿಹಾರ, ಶೀಘ್ರವೇ ಯಾಗ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post