ಚೆನ್ನೈ: ತಮಿಳುನಾಡಿನ ಪೊಂಗಲ್ ಹಬ್ಬದ ಆಚರಣೆಯನ್ನ ಚುನಾವಣಾ ರಾಜಕಾರಣದ ವೇದಿಕೆಯನ್ನಾಗಿ ಬಳಸಿಕೊಳ್ಳಲು ರಾಜಕೀಯ ಪಕ್ಷಗಳು ಮುಂದಾಗಿವೆ. ಒಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮಿಳುನಾಡಿನ ಜನಪ್ರಿಯ ಆಚರಣೆ ಜಲ್ಲಿಕಟ್ಟುವಿನಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ.
ಇದರ ಹಿಂದೆಯೇ ಇದೀಗ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ. ನಡ್ಡಾ ತಮಿಳುನಾಡಿಗೆ ಬಂದಿಳಿದಿದ್ದಾರೆ. ನಡ್ಡಾ ಪೊಂಗಲ್ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ತಮಿಳುನಾಡಿಗೆ ಬಂದಿಳಿಯುತ್ತಲೇ ರೋಡ್ಶೋ ನಡೆಸಿದ ನಡ್ಡಾಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಾಥ್ ನೀಡಿದ್ದಾರೆ.
தேசியத்தலைவர் திரு.@JPNadda அவர்களுடன், மாநில தலைவர் @Murugan_TNBJP தேசிய பொதுச்செயலாளர் @CTRavi_BJP ஆகியோர் திறந்த வாகனத்தில் "நம்ம ஊரு பொங்கல்" விழாவில் கலந்துகொள்ள மதுரவாயல் செல்லும் வழியில் …#WelcomeNaddaJi pic.twitter.com/R4v5u5jV7j
— BJP Tamilnadu (@BJP4TamilNadu) January 14, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post