ತಿರವನಂತಪುರಂ: ಶಬರಿಮಲೆ ಅಯ್ಯಪ್ಪ ದೇವಾಲಯದ ಸಮೀಪದ ಬೆಟ್ಟದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮಕರ ಜ್ಯೋತಿ ದರ್ಶನವಾಗಿದೆ.
ಸಂಕ್ರಾಂತಿ ಹಬ್ಬದ ವೇಳೆ ಉತ್ತರ ಫಾಲ್ಗುಣಿ ನಕ್ಷತ್ರದಲ್ಲಿ ಅಯ್ಯಪ್ಪ ಸ್ವಾಮಿ ಜನಿಸಿದರು ಎಂಬ ಪ್ರತೀತಿ ಇದೆ, ಮಕರ ಜ್ಯೋತಿಯನ್ನ ನೋಡಿದ ಭಕ್ತರಿಗೆ ತಮ್ಮ ಇಷ್ಟಸಿದ್ಧಿ ನೆರವೇರುತ್ತದೆ ಎಂಬ ನಂಬಿಕೆ ಇದೆ. ಜ್ಯೋತಿ ನೋಡಲು ಸಾವಿರಾರು ಮಂದಿ ಭಕ್ತರು ಶಬರಿಮಲೆಯಲ್ಲಿ ನೆರೆದಿದ್ದರು. ಜ್ಯೋತಿ ಕಾಣಿಸಿಕೊಳ್ಳುತ್ತಿದ್ದಂತೆ ಅಯ್ಯಪ್ಪನ ಸ್ಮರಣೆ ಮಾಡುವ ಮೂಲಕ ಭಕ್ತರು ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರತಿವರ್ಷ ಮಕರಜ್ಯೋತಿ ನೋಡಲು ಲಕ್ಷಾಂತರ ಭಕ್ತರು ಅಯ್ಯಪ್ಪನ ಸನ್ನಿಧಿಯಲ್ಲಿ ನೆರೆದಿರುತ್ತಿದ್ದರು. ಈ ವರ್ಷ ಕೊರೊನಾ ಹಿನ್ನೆಲೆ ನಿಯಮಿತ ಭಕ್ತರಿಗಷ್ಟೇ ಅಯ್ಯಪ್ಪ ಸನ್ನಿಧಿಗೆ ಅವಕಾಶ ನೀಡಲಾಗಿತ್ತು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post