ಬೆಂಗಳೂರು: CM ವಿರುದ್ಧ ಮಾತಾಡಿದ್ರೆ ಅದು ಪಕ್ಷಕ್ಕೆ ಕೆಟ್ಟದು ಮಾಡಿದ ಹಾಗೆ ಯಡಿಯೂರಪ್ಪ ವಚನ ಭ್ರಷ್ಟ ಅಲ್ಲ.. ಅವರು ಮಾತು ತಪ್ಪಿಲ್ಲ ಎಂದು ಶಾಸಕ ಮುನಿರತ್ನ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮುನಿರತ್ನ ಯಡಿಯೂರಪ್ಪ ಮಾತು ತಪ್ಪಿಲ್ಲ ಕೆಲವು ಸಂಧರ್ಭಗಳಲ್ಲಿ ಹೀಗಾಗುತ್ತದೆ. ಸಚಿವ ಸ್ಥಾನ ಸಿಗಲಿಲ್ಲ ಎಂದು ಕೆಟ್ಟದಾಗಿ ಮಾತನಾಡಬಾರದು. ನಮ್ಮದು ರಾಷ್ಟ್ರೀಯ ಪಕ್ಷ ಅಲ್ಲಿಂದ ಬರುವುದು ವಿಳಂಬ ಆಗಬಹುದು, ಅಲ್ಲಿಯ ವರೆಗೂ ನಾನು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡಿತ್ತೇನೆ. ಜನರ ಹೃದಯದಲ್ಲಿ ನಾನ ಸ್ಥಾನ ಪಡೆದಿದ್ದೇನೆ. ಅರುಣ್ ಸಿಂಗ್ ಕಾರಣಾಂತರಗಳಿಂದ ವಿಳಂಬ ಆಗಿದೆ ಎಂದು ಹೇಳಿದ್ರು ಎಂದಿದ್ದಾರೆ.
ಇದೇ ವೇಳೆ ಸಿಡಿ ಬಿಡುಗಡೆ ಮಾಡುವ ಮಾತುಗಳು ಕೇಳಿ ಬಂದಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಮುನಿರತ್ನ ಆಧಾರ ರಹಿತವಾಗಿ ಮಾತನಾಡಬಾರದು. ಸಿಡಿ ಇದ್ರೆ ಅದನ್ನ ತೋರಿಸಿ ಸುಮ್ಮನೆ ಏನೇನೋ ಹೇಳಬೇಡಿ. ಗೌರವಯುತವಾಗಿ ಮಾತನಾಡುವುದಕ್ಕೆ ಸಿಎಂ ಎಲ್ಲಾ ಅವಕಾಶ ಮಾಡಿಕೊಡುತ್ತಿದ್ದಾರೆ. ಪಕ್ಷಕ್ಕೆ ಮುಜುಗರ ತರುವ ಕೆಲಸ ಯಾರೂ ಮಾಡಬಾರದು, ಸಚಿವ ಸ್ಥಾನ ನನ್ನ ಹಣೆಯಲ್ಲಿ ಬರೆದಿದ್ರೆ ಸಿಗುತ್ತೆ ಇಲ್ಲ ಅಂದ್ರೆ ಇಲ್ಲ ಎಂದಿದ್ದಾರೆ.
ನನಗೆ ಸಚಿವ ಸ್ಥಾನ ಇಲ್ಲ ಅಂತ ಚಿಂತೆ ಇಲ್ಲ, ಸ್ಥಾನ ಬೇಕು ಎಂದು ನಾನು ಅರುಣ್‌ಸಿಂಗ್ ಬಳಿ ಕೇಳಿಲ್ಲ. ಮಾತು ಕೊಟ್ಟಿದ್ದಾರೆ ಎಂದು ಅದನ್ನು ದುರುಪಯೋಗ ಮಾಡಿಕೊಳ್ಳಬಾರದು, ಬೇರೆಯವರಿಗೂ ನಮಗೂ ಹೋಲಿಕೆ ಮಾಡಿಕೊಳ್ಳಬಾರದು. ಕೆಲವು ಸಂದರ್ಭಗಳಲ್ಲಿ ಕೆಟ್ಟ ಸಮಯ ಬರುತ್ತೆ ಆಗ ಏನು ಮಾಡುವುದಕ್ಕೆ ಆಗಲ್ಲ. ಪರಿಸರದಲ್ಲಿ ಮಳೆ, ಗಾಳಿ ಎಲ್ಲವೂ ಇರುತ್ತದೆ ನಾವು ಎಲ್ಲದಕ್ಕೂ ಹೊಂದಿಕೊಂಡು ಹೋಗುತ್ತೇವೆ. ನೀವು ನನ್ನ ರೀತಿಯಲ್ಲಿ ಜೀವನ ಅರ್ಥ ಮಾಡಿಕೊಂಡ್ರೆ ನನ್ನ ದಾರಿಯಲ್ಲಿ ಬರುತ್ತೀರಿ, ನನ್ನ ಜನ ನಾನು ಸಚಿವ ಆಗುತ್ತೇನೆ ಎಂದು ಮತ ಹಾಕಿಲ್ಲ ಎಂದಿದ್ದಾರೆ. ನನ್ನ ಜೊತೆಗೆ ಬಂದವರು ಹುಬ್ಬಳ್ಳಿ, ಧಾರವಾಡ ಸೇರಿ ಎಲ್ಲಾ ಕಡೆ ಬ್ಯುಸಿ ಇದ್ದಾರೆ, ಯಾರಿಗೂ ಮಾತಾಡುವುದಕ್ಕೆ ಫ್ರೀ ಇಲ್ಲ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ. ನಮ್ಮ ಜೊತೆ ಬಂದು ಸಚಿವರಾದವರು ಬಿಜೆಪಿ ಪಕ್ಷಕ್ಕೆ ತುಂಬಾ ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ ಎಂದಿದ್ದಾರೆ.
ಅಂದು ವಿಶ್ವೇಶ್ವರಯ್ಯ ಸ್ಥಾಪಿಸಿದ ಎಸ್ ಬಿ ಎಂ ಇದ್ಯಾ?, ಅದು ಇವಾಗ ಎಸ್‌ಬಿಐ ಆಗಿದೆ. ಅಂದ್ರೆ ನಾವೆಲ್ಲಾ ಇಂಡಿಯಾ ಅಂತ ಅರ್ಥ ಎಂದಿದ್ದಾರೆ. ನನಗೆ ಯಾವುದೇ ತನಿಖಾ ಸಂಸ್ಥೆ ಬಗ್ಗೆ ಗೊತ್ತಿಲ್ಲ, ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ನಲ್ಲಿ ಶೇ 60% ರಷ್ಟು ವಲಸಿಗರು ಇದ್ದಾರೆ ಅಂತಾನೆ ಹೇಳುತ್ತಿದ್ದಾರೆ. ಮುನಿರತ್ನ ಒಬ್ಬ ಕಾರ್ಯಕರ್ತ, ಹಾಗೇ ಮುಂದುವರೆಯುತ್ತಾನೆ, ಕ್ಷೇತ್ರದ ಜನರ ಋಣ ತೀರಿಸಬೇಕಿದೆ ಎಂದಿದ್ದಾರೆ. ನಾನು ದೇವರನ್ನು ನಂಬುವ ಮನುಷ್ಯ, ದೇವರು ಇದ್ದಾನೆ ಅನ್ನುವ ಧರ್ಮದಲ್ಲಿ ಹುಟ್ಟಿದ್ದೇನೆ. ಅವರ ದಯೆದಿಂದ ಸರ್ಕಾರ ಸುಭದ್ರವಾಗಿದೆ, ಇನ್ನೂ ಎರಡೂ ವರ್ಷ ಹಾಗೆ ಇರುತ್ತದೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post